ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕೆಲ ರಾಜಕೀಯ ನಾಯಕರು ತಿರುಚಿದ್ದಾರೆ. ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ಕೂಡ ಪ್ಯಾರಿಸ್ ನಗರದಷ್ಟೇ ಸುಂದರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಹೊರತು ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಹೇಳಿಲ್ಲ. 2014ರಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಒಮ್ಮೆ ನೋಡಿ. ಮೈಸೂರು ಕೂಡ ಪ್ಯಾರಿಸ್ ನಂತೆ ಇದೆ ಎಂದಿದ್ದಾರೆ. ಕೆಲ ರಾಜಕಾರಣಿಗಳು ಪ್ರಧಾನಿ ಹೇಳಿಕೆ ತಿರುಚಿದ್ದಾರಷ್ಟೇ ಎಂದರು.
ಮೈಸೂರಿಗೆ ಪ್ಯಾರಿಸ್ ನಷ್ಟೆ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ. 2014ರಲ್ಲಿ ಪ್ಯಾರಿಸ್ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆದಿತ್ತು. ಮೈಸೂರಿಗೂ ಆ ಶಕ್ತಿಯಿದೆ ಎಂದು ಹೇಳಿದ್ದರು ಎಂದು ವಿವರಿಸಿದ್ದಾರೆ.