ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಶೀಘ್ರದಲ್ಲೇ ಉಡುಗೊರೆ ಪಡೆಯಬಹುದು. ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಫಿಟ್ ಮೆಂಟ್ ಅಂಶ ಚರ್ಚೆಯಾಗಬಹುದು ಎಂದು ಹೇಳಲಾಗಿದೆ.
7ನೇ ವೇತನ ಆಯೋಗ ಫಿಟ್ ಮೆಂಟ್ ಅಂಶದ ಬಗ್ಗೆ ನಾಳೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಉದ್ಯೋಗಿಗಳ ಮೂಲ ವೇತನ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18 ಸಾವಿರ ರೂಪಾಯಿ ಬದಲಾಗಿ 26 ಸಾವಿರ ರೂಪಾಯಿ ಆಗಲಿದೆ.
ಫಿಟ್ಮೆಂಟ್ ಅಂಶ ಹೆಚ್ಚಿಸಬಹುದು
ಮಾಹಿತಿಯ ಪ್ರಕಾರ, ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಬಹುದು. ಕೇಂದ್ರ ನೌಕರರ ವೇತನವನ್ನು ಹೆಚ್ಚಿಸಲು ಫಿಟ್ ಮೆಂಟ್ ಅಂಶವನ್ನು ಮಾತ್ರ ಬಳಸಲಾಗುತ್ತದೆ. ಮೋದಿ ಸರ್ಕಾರ ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸಿದರೆ ಉದ್ಯೋಗಿಗಳ ಕನಿಷ್ಠ ಮೂಲ ವೇತನ ಹೆಚ್ಚಾಗುತ್ತದೆ.
ಬಹು ದಿನಗಳ ಬೇಡಿಕೆ
ಕೇಂದ್ರ ಮತ್ತು ರಾಜ್ಯ ನೌಕರರು ತಮ್ಮ ಫಿಟ್ ಮೆಂಟ್ ಅಂಶವನ್ನು ಶೇ.2.57 ರಿಂದ ಶೇ.3.68 ಕ್ಕೆ ಹೆಚ್ಚಿಸಬೇಕು ಎಂದು ಬಹುಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ, ನೌಕರರು ಫಿಟ್ ಮೆಂಟ್ ಅಂಶದ ಅಡಿಯಲ್ಲಿ ಶೇಕಡ 2.57 ಆಧಾರದ ಮೇಲೆ ಸಂಬಳ ಪಡೆಯುತ್ತಿದ್ದಾರೆ. ಶೇ. 3.68ಕ್ಕೆ ಹೆಚ್ಚಿಸಿದರೆ ಕಾರ್ಮಿಕರ ಕನಿಷ್ಠ ವೇತನ 8 ಸಾವಿರ ರೂ. ಅಂದರೆ ಕೇಂದ್ರ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.
ಎಲ್ಲಾ ಭತ್ಯೆಗಳು ಹೆಚ್ಚಾಗುತ್ತವೆ
ಮೂಲವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾದರೆ ನೌಕರರ ವೇತನವೂ ಹೆಚ್ಚಾಗಲಿದೆ. ಕನಿಷ್ಠ ವೇತನ 18 ಸಾವಿರ ರೂಪಾಯಿ ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ 2.57 ಫಿಟ್ ಮೆಂಟ್ ಅಂಶದ ಪ್ರಕಾರ, 46,260(18000 X 2.57) ಸಿಗಲಿದೆ. ಫಿಟ್ ಮೆಂಟ್ ಅಂಶವು 3.68 ಆಗಿದ್ದರೆ ನಿಮ್ಮ ಸಂಬಳ 95,680 ರೂ (26000 X 3.68) ಆಗಿರುತ್ತದೆ.