ಆಲಮಟ್ಟಿ ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿಯೇ ಮೂರನೇ ಒಂದು ಭಾಗದಷ್ಟು ನೀರು ಭರ್ತಿಯಾಗಿದೆ. ಜಲಾಶಯದ ನೀರಿನ ಸಂಗ್ರಹ ಒಟ್ಟು 123.081 ಟಿಎಂಸಿ ಅಡಿಗಳಾಗಿದ್ದು ಪ್ರಸ್ತುತ 41.036 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಅದರಲ್ಲೂ ಸೋಮವಾರ ಒಂದೇ ದಿನ ಬರೋಬ್ಬರಿ 42,973 ಕ್ಯುಸೆಕ್ ನೀರು ಹರಿದು ಬರುವ ಮೂಲಕ 3.71 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ 519.60 ಮೀಟರ್ ಎತ್ತರವಿದ್ದು, ಪ್ರಸ್ತುತ 512.02 ಮೀಟರ್ ನೀರು ಸಂಗ್ರಹವಾಗಿದೆ.
ಆದರೆ ಇದೀಗ ಮಳೆ ಇಳಿಮುಖವಾಗಿರುವ ಕಾರಣ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ಜಲಾಶಯದ ಹಿಂಭಾಗದ ಹಿಪ್ಪರಗಿ ಜಲಾಶಯಕ್ಕೆ ಒಳಹರಿವು ಇಳಿದಿರುವ ಕಾರಣ ಐದು ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.