ನವದೆಹಲಿ: ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಇತ್ತೀಚೆಗಷ್ಟೇ 40 ಮೂಲಾಂಶದಷ್ಟು ರೆಪೋ ದರ ಏರಿಕೆ ಮಾಡಿದ್ದ ಆರ್.ಬಿ.ಐ. ಜೂನ್ ನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿದೆ.
ಜೂನ್ 6 ರಿಂದ 8 ರವರೆಗೆ ಆರ್.ಬಿ.ಐ. ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆಯಲಿದ್ದು, ರೆಪೋ ದರ ಏರಿಕೆಯಾಗುವ ಸಾಧ್ಯತೆ ಇದೆ. ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ.
ರೆಪೋ ದರಕ್ಕೆ ಅನುಗುಣವಾಗಿ ಎಸ್.ಬಿ.ಐ. ಗೃಹ ಸಾಲದ ಬಡ್ಡಿ ದರವನ್ನು 50 ಮೂಲಾಂಶದಷ್ಟು ಏರಿಕೆ ಮಾಡಿದೆ. ಮತ್ತೆ ರೆಪೋ ದರ ಏರಿಕೆಯಾದಲ್ಲಿ ಸಾಲಗಾರರಿಗೆ ಸಾಲದ ಕಂತುಗಳ ಹೊರೆಯಾಗಲಿದೆ ಎಂದು ಹೇಳಲಾಗಿದೆ.