ಅದ್ಭುತ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲೆಯೊಂದರಲ್ಲಿ ಆಟಗಳಲ್ಲಿ ಭಾಗವಹಿಸಲು ಗಾಲಿಕುರ್ಚಿಯಲ್ಲಿ ಕುಳಿತಿರುವ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಬಾಲಕನ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ.
ಮಕ್ಕಳು ಅತ್ತಿಂದಿತ್ತ ಓಡಾಡುತ್ತಿದ್ದರೆ, ಗಾಲಿಕುರ್ಚಿಯಲ್ಲಿದ್ದ ಬಾಲಕ ಮಾತ್ರ ಕುಳಿತೇ ಇದ್ದ. ತನ್ನ ವಿಕಲಚೇತನ ಸ್ನೇಹಿತ ಯಾವುದೇ ವಿನೋದವನ್ನು ಕಳೆದುಕೊಳ್ಳಬಾರದು ಎಂದು ಬಯಸಿದ ಬಾಲಕ ಆತನನ್ನು ಸಹ ಆಟದಲ್ಲಿ ಸೇರಿಸಿಕೊಂಡಿದ್ದಾನೆ.
ಈ ವಿಡಿಯೋವನ್ನು ಫ್ರೆಡ್ ಷುಲ್ಟ್ಜ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಗುಂಪನ್ನು ವಿಡಿಯೋ ತೋರಿಸುತ್ತದೆ. ಈ ಹುಡುಗ ಗಾಲಿಕುರ್ಚಿಯನ್ನು ತಳ್ಳುವ ಮೂಲಕ ತನ್ನ ಸ್ನೇಹಿತನಿಗೆ ಸಹಾಯ ಮಾಡಿದ್ದಾನೆ. ಅಂತಿಮ ಹಂತವನ್ನು ತಲುಪಲು ಓಡುತ್ತಿದ್ದ ಇತರ ಮಕ್ಕಳೊಂದಿಗೆ ಸ್ಪರ್ಧಿಸಿದ್ದಾನೆ.
ಸಹಜವಾಗಿ, ನೆಟ್ಟಿಗರು ಈ ಹೃದಯಸ್ಪರ್ಶಿ ಕ್ಷಣವನ್ನು ಇಷ್ಟಪಟ್ಟಿದ್ದಾರೆ. ಬಾಲಕನ ಬಗ್ಗೆ ಜನರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮನಸ್ಸು ಬಹಳ ಪರಿಶುದ್ಧವಾಗಿರುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
https://twitter.com/FredSchultz35/status/1528354053666787329?ref_src=twsrc%5Etfw%7Ctwcamp%5Etweetembed%7Ctwterm%5E1528354053666787329%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fboy-helps-his-friend-in-a-wheelchair-participate-in-games-at-school-heartwarming-viral-video-1952981-2022-05-23