ರೋಮ್‌ನ ಐಕಾನಿಕ್ ಎನಿಸಿಕೊಂಡ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಬಾಡಿಗೆಗೆ ಪಡೆದ ಐಷಾರಾಮಿ ಮೇಸರಾಟಿ ಕಾರು ಓಡಿಸಿದ ಸೌದಿ ಮೂಲದ ವ್ಯಕ್ತಿ ದಂಡ ತೆತ್ತಿದ್ದಾನೆ.
ಆ ವ್ಯಕ್ತಿ ಕಾರನ್ನು ಓಡಿಸುವಾಗ ಮೆಟ್ಟಿಲುಗಳಿಗೆ ಹಾನಿ ಮಾಡಿದ ಎಂಬ ಆರೋಪ ಹೊರಿಸಲಾಗಿದೆ. ಘಟನೆಯ ನಂತರ ಆರೋಪಿಯನ್ನು ಮಿಲನ್‌ನ ಮಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಈ ಮೊದಲು ಅಧಿಕಾರಿಗಳು ಸಿಸಿ ಟಿವಿ ಕ್ಯಾಮೆರಾ ದೃಶ್ಯದ ಆಧಾರದಲ್ಲಿ ಆ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಇದಲ್ಲದೆ, ಅವರು ಆತ ಬಳಸಿದ ಕಾರು ಕಂಪನಿಯ ಡೇಟಾವನ್ನು ಬಳಸಿಕೊಂಡು ವ್ಯಕ್ತಿಯ ಗುರುತನ್ನು ಖಚಿತಮಾಡಿಕೊಂಡರು.
BIG NEWS: ರಿವಾಲ್ವರ್ ನಿಂದ ಬೆದರಿಸಿ ಯುವತಿ ಮೇಲೆ ಅತ್ಯಾಚಾರ; ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಬಂಧನ
35 ವರ್ಷದ ಆ ಸೌದಿ ಪ್ರಜೆಯ ಹೆಸರನ್ನು ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಘಟನೆಯು ತಡರಾತ್ರಿ ನಡೆದಿದ್ದು, ಸಾಂಸ್ಕೃತಿಕ ಪರಂಪರೆ ಮತ್ತು ಸ್ಮಾರಕಕ್ಕೆ ಧಕ್ಕೆಯಾದ ಹಿನ್ನೆಲೆ ಪ್ರಕರಣ ದಾಖಲಿಸಲು ಕಾರಣವಾಯಿತು.
ವಿಡಿಯೊದ ಪ್ರಕಾರ ಕಾರು ಮೊದಲ ಮೆಟ್ಟಿಲುಗಳನ್ನು ಇಳಿಯುತ್ತದೆ. ನಂತರ ವ್ಯಕ್ತಿಯೊಬ್ಬ ವಾಹನದಿಂದ ಹೊರಬರುತ್ತಾನೆ. ಆತನ ಹುಚ್ಚಾಟಕ್ಕೆ 16 ಮತ್ತು 29 ನೇ ಮೆಟ್ಟಿಲುಗಳು ಜಖಂ ಆಗಿದೆ ಎಂದು ರೋಮ್‌ನ ಪರಂಪರೆ ಸಂರಕ್ಷಣಾ ಸಂಸ್ಥೆಯ ಹೇಳಿಕೆ ತಿಳಿಸಿದೆ. ಮತ್ತೊಂದೆಡೆ, ಅಪರಾಧಿಯ ಉದ್ದೇಶ ತಿಳಿದಿಲ್ಲ. ಸ್ಪ್ಯಾನಿಷ್ ಸ್ಟೆಪ್ ರೋಮನ್ ನ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಒಂದಾಗಿದೆ.