ಬೆಂಗಳೂರು: ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿ ಉದ್ಯಮಿಯೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂಧಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಟೈಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದ ಬಿಹಾರ ಮೂಲದ ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಎಂಬಾತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಉದ್ಯಮಿಯ ಒಡೆತನದ ಪಿಜಿಯಲ್ಲಿಯೇ ವಾಸವಾಗಿದ್ದಳು. ಆಕೆಗೆ ರಿವಾಲ್ವರ್ ನಿಂದ ಬೆದರಿಸಿ ಆಕೆಯ ಮೇಲೆ ಉದ್ಯಮಿ ಅತ್ಯಾಚಾರ ನಡೆಸಿದ್ದ. ಇದೀಗ ಆರೋಪಿಯನ್ನು ಬಂಧಿಸಿ, ರಿವಾಲ್ವರ್ ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.