alex Certify ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ,  ವಧು-ವರರ ಬಗ್ಗೆ ಹಲವಾರು ವಿಚಿತ್ರವಾದ ಮತ್ತು ವಿಶಿಷ್ಟವಾದ ಕಥೆಗಳನ್ನು ನೀವು ಕೇಳಿರಬಹುದು. ಇದೀಗ ಹಸೆಮಣೆಯಲ್ಲಿ ಕುಳಿತಿದ್ದ ವಧು, ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ವರನನ್ನು ಮದುವೆಯಾಗಲು ನಿರಾಕರಿಸಿರೋ ಘಟನೆ ನಡೆದಿದೆ.

ಉತ್ತರ ಪ್ರದೇಶದ ಉನ್ನಾವೊದ ವಧು, ವರನ ತಲೆ ಬೋಳಾಗಿದೆ ಎಂದು ತಿಳಿದ ನಂತರ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ತಲೆಗೆ ವಿಗ್ ಧರಿಸಿ ಬೋಳು ತಲೆಯನ್ನು ವರ ಮರೆಮಾಚಿದ್ದಾನೆ. ಈ ಘಟನೆಯು ಖಂಡಿತವಾಗಿಯೂ ನಿಮಗೆ ಆಯುಷ್ಮಾನ್ ಖುರಾನಾ ಅವರ 2019ರ ಚಲನಚಿತ್ರ ‘ಬಾಲಾ’ವನ್ನು ನೆನಪಿಸುತ್ತದೆ. ಇದು ಬೋಳು ತಲೆಯಿರುವ ಮತ್ತು ಮದುವೆಯಾಗಲು ತನ್ನ ಹೆಂಡತಿಯಿಂದ ಅದನ್ನು ಮರೆಮಾಡುವ ವ್ಯಕ್ತಿಯ ಕಥೆಯಾಗಿದೆ.

ಈ ಉನ್ನಾವೋ ಘಟನೆಯಲ್ಲಿ, ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದಿದ್ದವು. ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಅನ್ನೋವಾಗ ಇಡೀ ಸನ್ನಿವೇಶವು ಬದಲಾಗಿದೆ. ವರ, ಮಂಟಪಕ್ಕೆ ಕಾಲಿಡುವ ಮೊದಲು, ಮೂರ್ಛೆ ತಪ್ಪಿದ್ದಾನೆ. ಆತ ತಲೆಸುತ್ತಿ ಕೆಳಕ್ಕೆ ಬಿದ್ದಾಗ, ವರನ ಅಸಲಿಯತ್ತು ಬಯಲಾಗಿದೆ. ಆತ ಧರಿಸಿದ್ದ ವಿಗ್ ಹೊರಬಂದಿದೆ. ಈ ವೇಳೆ ವಧುವಿನ ಕುಟುಂಬದಿಂದ ಮರೆಮಾಡಲ್ಪಟ್ಟ ಸತ್ಯವನ್ನು ಎಲ್ಲರೂ ನೋಡಿದ್ದಾರೆ.

ವರನ ಬೋಳು ತಲೆ ಕಂಡು ವಧು ಮದುವೆಗೆ ಒಲ್ಲೆ ಎಂದಿದ್ದಾಳೆ. ಅನೇಕರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಮಧ್ಯಪ್ರವೇಶಿಸಿದರೂ ಸಹ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...