ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹ-ಅವಲಂಬನೆಯ ಕ್ರಿಯೆಗಳು ಯಾವಾಗಲೂ ಅದ್ಭುತವಾದ ತಾಣವಾಗಿದೆ. ವಿಭಿನ್ನ ಜಾತಿಯ ಪ್ರಭೇದ (ಪ್ರಾಣಿ) ಗಳು ಹೇಗೆ ಪರಸ್ಪರ ಸಹಾಯ ಮಾಡುತ್ತವೆ ಎಂಬುದನ್ನು ಬಹುಶಃ ನೀವು ನೋಡಿರಬಹುದು. ಆದರೆ, ಎಂದಾದ್ರೂ ಶ್ವಾನ-ಕೋತಿಯ ನಡುವಿನ ಸಹಜೀವನವನ್ನು ಎಂದಾದರೂ ನೋಡಿದ್ದೀರಾ? ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವು ನೋಡಲೇಬೇಕು.
ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಜನರಲ್ ಸ್ಟೋರ್ ಬಳಿ ನಿಂತಿರುವುದು ಕಂಡುಬರುತ್ತದೆ. ಶ್ವಾನದ ಮೇಲೆ ಕೋತಿಯೊಂದು ಕುಳಿತಿದೆ. ನಾಯಿಯ ಬೆನ್ನಿನ ಮೇಲೆ ನಿಂತು, ಕೋತಿ ಅಂಗಡಿಯಲ್ಲಿ ನೇತು ಹಾಕಲಾಗಿದ್ದ ಚಿಪ್ಸ್ ಪ್ಯಾಕೆಟ್ ಅನ್ನು ಕದಿಯಲು ಪ್ರಯತ್ನಿಸುತ್ತಿದೆ. ಮಂಗ ಪ್ಯಾಕೆಟ್ ಅನ್ನು ಕದಿಯಲು ಪ್ರಯತ್ನಿಸುತ್ತಿರುವಾಗ, ನಾಯಿ ಪ್ಯಾಕೆಟ್ ಅನ್ನು ನೋಡುತ್ತಾ ನಿಂತಿದೆ.
ದುರದೃಷ್ಟವಶಾತ್, ಕೋತಿಯು ಸಮತೋಲನವನ್ನು ಕಳೆದುಕೊಂಡು ನಾಯಿಯ ಹಿಂಭಾಗದಿಂದ ಬಿದ್ದಿದ್ದರಿಂದ ಈ ಕಳ್ಳತನ ವಿಫಲವಾಗಿದೆ. ಕೋತಿ ಮತ್ತೆ ನಾಯಿಯ ಬೆನ್ನಿನ ಮೇಲೆ ನಿಂತು ಚಿಪ್ಸ್ ಪ್ಯಾಕೆಟ್ ಗಾಗಿ ಹಾರುತ್ತದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಈ ವಿಡಿಯೋ ಶೇರ್ ಆಗಿದ್ದರೂ ಮತ್ತೆ ವೈರಲ್ ಆಗುತ್ತಿದೆ. ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಕಾಮೆಂಟ್ಗಳನ್ನು ಗಳಿಸಿದೆ. ನಾಯಿ ಮತ್ತು ಕೋತಿ ನಡುವಿರುವ ಸ್ನೇಹ ನೆಟ್ಟಿಗರಿಗೆ ಇಷ್ಟವಾಗಿದೆ. ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ನೆಟ್ಟಿಗರು ತುಂಬಿದ್ದಾರೆ.