alex Certify ಬೋಟ್ ಸಂಸ್ಥೆಯ ಒಂದು ದಿನದ ಸಿಇಒ ಆದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋಟ್ ಸಂಸ್ಥೆಯ ಒಂದು ದಿನದ ಸಿಇಒ ಆದ ಬಾಲಕ

11 ವರ್ಷ ವಯಸ್ಸಿನ ದೃಷ್ಟಿಹೀನ ಬಾಲಕನೊಬ್ಬ ಒಂದು ದಿನಕ್ಕೆ ಬೋಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ.

ಬ್ರೈಲ್ ಲಿಪಿಯನ್ನು ಕಲಿಯಲು ಸುಲಭವಾಗಿಸುವ ಗುರಿಯನ್ನು ಹೊಂದಿರುವ ಗ್ಯಾಜೆಟ್ ಕುರಿತು, ವ್ಯವಹಾರ ಕಲ್ಪನೆಯನ್ನು ನೀಡಲು ಬಾಲಕ ಪ್ರಥಮೇಶ್ ಸಿನ್ಹಾ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ. ಬೋಟ್ ಲೈಫ್‌ಸ್ಟೈಲ್‌ನ ಸಿಇಒ ಅಮನ್ ಗುಪ್ತಾ ಅವರು ಇತ್ತೀಚೆಗಷ್ಟೇ ಪ್ರಥಮೇಶ್‌ನನ್ನು ಬೋಟ್‌ ಪ್ರಧಾನ ಕಛೇರಿಗೆ ಆಹ್ವಾನಿಸಿ ಒಂದು ದಿನದ ಮಟ್ಟಿಗೆ ಸಿಇಒ ಸ್ಥಾನದಲ್ಲಿ ಕೂರಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಮನ್ ಗುಪ್ತಾ ಮತ್ತು ಬೋಟ್ ಸಂಸ್ಥೆ ಹಂಚಿಕೊಂಡ ವಿಡಿಯೋದಲ್ಲಿ, ಪ್ರಥಮೇಶ್ ಮತ್ತು ಅಮನ್ ಗುಪ್ತಾ ನಡುವಿನ ಸಂವಾದವನ್ನು ಕಾಣಬಹುದು. ಗುಪ್ತಾ ಅವರು ಪ್ರಥಮೇಶ್ ಅವರನ್ನು ತಮ್ಮ ತಂಡಕ್ಕೆ ಪರಿಚಯಿಸಿದ್ರು. ಅಲ್ಲಿ ಅವರು ಸ್ಪೂರ್ತಿದಾಯಕ ಭಾಷಣ ಮಾಡಿದ್ದಾರೆ.

ಇಬ್ಬರೂ ಕೂಡ ಅದ್ಭುತ ಸಮಯವನ್ನು ಹೊಂದಿದ್ದರು. ಗುಪ್ತಾ ಪ್ರಥಮೇಶ್‌ಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಿದ್ದಾರೆ. ಕೋಟ್ಯಂತರ ಮುಖಗಳಲ್ಲಿ ನಗು ತರಿಸುವವನನ್ನು ಸ್ಮರಿಸುತ್ತಿದ್ದೇವೆ. ಅವರ ಮುಖದಲ್ಲಿ ನಗು ತರಿಸುವ ನಮ್ಮ ಪ್ರಯತ್ನಗಳಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಅವರಿಗೆ ಅನನ್ಯ ವಿದ್ಯಾರ್ಥಿವೇತನವನ್ನು ನೀಡುವುದರಿಂದ ಅವರು ಅರ್ಹವಾದ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ.

ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಾಗಿನಿಂದ ಹಲವಾರು ವೀಕ್ಷಣೆಗಳನ್ನು ಗಳಿಸಿ ವೈರಲ್ ಆಗಿದೆ. ಇಂತಹ ಉತ್ತಮ ಅವಕಾಶ ಮತ್ತು ಮೋಜಿನ ದಿನವನ್ನು ಒದಗಿಸಿದ್ದಕ್ಕಾಗಿ ಹಲವಾರು ಮಂದಿ ಅಮನ್ ಗುಪ್ತಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...