ಜೀಬ್ರಾ ಕ್ರಾಸಿಂಗ್‍ನಲ್ಲೇ ರಸ್ತೆ ದಾಟಿದ ಜಿಂಕೆ: ಮಾನವರಿಗಿರದ ವಿವೇಚನೆ ಪ್ರಾಣಿಗಳಿಗಿವೆ ಎಂದ ನೆಟ್ಟಿಗರು….! 21-05-2022 9:51AM IST / No Comments / Posted In: Latest News, India, Live News ಹಲವಾರು ಮಂದಿ ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್‌ನಲ್ಲಿ ದಾಟದೆ ಎಲ್ಲೆಂದರಲ್ಲೋ ದಾಟುತ್ತಾರೆ. ಈ ಮೂಲಕ ರಸ್ತೆ ಸುರಕ್ಷತೆ ಕ್ರಮವನ್ನು ಸಂಪೂರ್ಣ ಉಲ್ಲಂಘಿಸುತ್ತಾರೆ. ಇದೀಗ, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಲು ಯುಪಿ ಪೊಲೀಸರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ರೆ ಮನುಷ್ಯರಿಗಿರದ ಬುದ್ಧಿ ಪ್ರಾಣಿಗಳಿಗಿವೆ ಎಂದೆನಿಸೋದು ಸುಳ್ಳಲ್ಲ. ಇದೀಗ, ಯುಪಿ ಪೊಲೀಸರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜೀಬ್ರಾ ಕ್ರಾಸಿಂಗ್‌ನಲ್ಲಿ ಜಿಂಕೆಯೊಂದು ಕಾಣಿಸಿಕೊಂಡಿದೆ. ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿ ವಾಹನಗಳು ನಿಂತಾಗ ಮಾತ್ರ ಅದು ರಸ್ತೆ ದಾಟಿದೆ. ಜೀವನವು ತುಂಬಾ ಅಮೂಲ್ಯವಾಗಿದೆ. ಸಂಚಾರ ನಿಯಮಗಳ ಉಲ್ಲಂಘಿಸುವವರು ಈ ಜಿಂಕೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಸುಮಾರು 33 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಪೊಲೀಸ್ ಇಲಾಖೆ ಜನರನ್ನು ಒತ್ತಾಯಿಸಿದ ಸೃಜನಶೀಲ ಮಾರ್ಗಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಿಂಕೆಗಳು ರಸ್ತೆ ಸುರಕ್ಷತೆಯನ್ನು ಅನುಸರಿಸುತ್ತವೆ. ನಾವು ಮನುಷ್ಯರು, ನಾವು ಅದನ್ನು ಏಕೆ ಅನುಸರಿಸಬಾರದು? ದಯವಿಟ್ಟು ರಸ್ತೆ ಸುರಕ್ಷತೆಯನ್ನು ಅನುಸರಿಸಿ ಮತ್ತು ಯಾವಾಗಲೂ ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಬಳಕೆದಾರರು ಬರೆದಿದ್ದಾರೆ. ಜಿಂಕೆ ದಾಟುತ್ತಿರುವ ಸ್ಥಳವು ವಾರಣಾಸಿಯ ಸಿಗ್ರಾ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದಾರೆ. ‘Deer Zindagi’ Life is precious, violation of traffic rules can prove to be dear! Follow #RoadSafety norms! जीवन अनमोल है। ट्रैफ़िक नियमों का उल्लंघन आपके लिए घातक हो सकता है। सड़क सुरक्षा के नियमों का पालन करें। pic.twitter.com/7apVkae30y — UP POLICE (@Uppolice) May 18, 2022 Location – Varanasi, Sigra crossing Vehicles don't respect Zebra.Police should enforce respect for Zebra crossing. — उप्र पंचायती राज अधिनियम में सुधार (@SureshKrShukla) May 19, 2022