alex Certify ಒತ್ತಡದ ತಲೆನೋವು ದೂರ ಮಾಡುತ್ತೆ ಈ ‘ಸುಲಭ ಟಿಪ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದ ತಲೆನೋವು ದೂರ ಮಾಡುತ್ತೆ ಈ ‘ಸುಲಭ ಟಿಪ್ಸ್’

ದಿನಪೂರ್ತಿ ಇರುವ ಕೆಲಸದ ಮಧ್ಯೆ ತಲೆ ನೋವು ಶುರುವಾದ್ರೆ ಕಥೆ ಮುಗಿದಂತೆ. ಇಡೀ ದಿನವನ್ನು ಈ ತಲೆ ನೋವು ಹಾಳು ಮಾಡುತ್ತದೆ. ಕೆಲವರಿಗೆ ತಲೆನೋವಿನ ಹೆಸರು ಕೇಳಿದ್ರೆ ಭಯವಾಗುತ್ತದೆ. ತಲೆ ಒಡೆದು ಹೋದಂತ ಅನುಭವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಈ ಭಯಾನಕ ತಲೆನೋವು ಬಹುತೇಕರಿಗೆ ಒತ್ತಡದಿಂದ ಬರುತ್ತದೆ.

ಎಲ್ಲ ಚಿಂತೆಗೂ ಧ್ಯಾನ ಉತ್ತಮ ಪರಿಹಾರ. ದಿನದಲ್ಲಿ ಐದು ನಿಮಿಷಗಳ ಕಾಲ ಧ್ಯಾನ ಮಾಡಿದ್ರೂ ಸಾಕಾಗುತ್ತದೆ. ಕಣ್ಣು ಮುಚ್ಚಿ ಮಾಡುವ ಧ್ಯಾನ ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಇದು ತಲೆನೋವು ದೂರ ಹೋಗುವಂತೆ ಮಾಡುತ್ತದೆ.

ಕೆಲಸದ ಒತ್ತಡದಲ್ಲಿ ನಗು ಮಾಸಿ ಹೋಗಿದೆ. ದೊಡ್ಡದಾಗಿ ಮನಸ್ಸು ಬಿಚ್ಚಿ ನಗುವವರ ಸಂಖ್ಯೆ ಕಡಿಮೆಯಾಗಿದೆ. ಈ ನಗು ಸರ್ವ ರೋಗಕ್ಕೂ ಮದ್ದು. ಮನಸ್ಸು ಬಿಚ್ಚಿ ನಕ್ಕಾಗ ಒತ್ತಡ ಕಡಿಮೆಯಾಗುವ ಜೊತೆಗೆ ನಿಮ್ಮ ಮೂಡ್ ಸರಿಯಾಗುತ್ತದೆ.

ಒತ್ತಡ ಕಡಿಮೆ ಮಾಡಲು ಡಾನ್ಸ್ ಕೂಡ ಉತ್ತಮ ಮಾರ್ಗ. ಚಿಂತೆ, ಒತ್ತಡ ನಿಮ್ಮನ್ನು ಕಾಡುತ್ತಿರುವ ವೇಳೆ ನಿಮಗಿಷ್ಟವಾಗುವ ಹಾಡಿಗೆ ಡಾನ್ಸ್ ಮಾಡಿ. ಡಾನ್ಸ್ ಮಾಡಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿರುವ ರಕ್ತ ಸಂಚಾರ ಸುಲಭವಾಗುತ್ತದೆ.

ಒತ್ತಡ ಕಾಡುತ್ತಿದ್ದಂತೆ ಸ್ವಲ್ಪ ದೂರ ನಡೆಯಿರಿ. ಇಲ್ಲವೆ ಓಡಿರಿ. ಇದು ಮೆದುಳಿನಲ್ಲಿ ಉತ್ತಮ ರಾಸಾಯನಿಕವನ್ನು ಬಿಡುಗಡೆ ಮಾಡುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...