alex Certify SHOCKING NEWS: ಪೊಲೀಸರ ಕಣ್ತಪ್ಪಿಸಲು ಹೋಗಿ ಭೀಕರ ಅಪಘಾತ; ಇಬ್ಬರು ಯುವಕರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪೊಲೀಸರ ಕಣ್ತಪ್ಪಿಸಲು ಹೋಗಿ ಭೀಕರ ಅಪಘಾತ; ಇಬ್ಬರು ಯುವಕರು ಸಾವು

ಮೈಸೂರು: ಬೈಕ್ ನಲ್ಲಿ ತ್ರಿಬಲ್ ರೈಡ್ ಹೋಗಿದ್ದ ಯುವಕರು ಪೊಲೀಸರ ಕಣ್ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ನಡೆದಿದೆ

ಸಚಿನ್ ಹಾಗೂ ದೊರೆಸ್ವಾಮಿ ಮೃತರು. ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ಯುವಕರು ತೆರಳುತ್ತಿದ್ದರು ಈ ವೇಳೆ ಅಪಘಾತ ಸಂಭವಿಸಿದೆ. ಮೂವರು ಯುವಕರು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೊರಟಿದ್ದರು. ಈ ವೇಳೆ ಎದುರುಗಡೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಬೈಕ್ ಯುಟರ್ನ್ ತೆಗೆದುಕೊಳ್ಳಲು ಹೋಗಿದ್ದಾರೆ.

ಯುಟರ್ನ್ ತೆಗೆದುಕೊಳ್ಳುವಾಗ ವೇಗವಾಗಿ ಬಂದ ಬಸ್, ಬೈಕಿಗೆ ಡಿಕ್ಕಿಹೊಡೆದಿದೆ. ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...