ರುದ್ರಪುರ: ಇಪ್ಪತ್ತೆರಡು ವರ್ಷದ ಯುವಕನೊಬ್ಬ 38 ವರ್ಷದ ಮಲತಾಯಿಯೊಂದಿಗೆ ಪ್ರೇಮಾಂಕುರವಾಗಿ, ಓಡಿ ಹೋಗಿ ವಿವಾಹವಾದ ಪ್ರಕರಣ ಉತ್ತರಾಖಂಡದ ರುದ್ರಪುರದ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಆಘಾತಗೊಂಡಿರುವ ತಂದೆ, ಮೊದಲ ಹೆಂಡತಿಯಲ್ಲಿ ಜನಿಸಿದ ಪುತ್ರನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ..!
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಉದಮ್ ಸಿಂಗ್ ನಗರ ಜಿಲ್ಲೆಯ ಬಾಜ್‌ಪುರ ಗ್ರಾಮದಲ್ಲಿ ಈ ವಿರಳ ಘಟನೆ ನಡೆದಿದೆ. 55 ವರ್ಷದ ತಂದೆ 11 ವರ್ಷ ಹಿಂದೆ ಮೊದಲ ಪತ್ನಿ ನಿಧನರಾದ ಬಳಿಕ ಎರಡನೇ ವಿವಾಹವಾಗಿದ್ದರು. ಈ ಎರಡನೇ ಪತ್ನಿಯನ್ನೇ ಈಗ ಮೊದಲ ಪತ್ನಿಯ ಪುತ್ರ ವಿವಾಹವಾಗಿರುವಂಥದ್ದು. ಈ ನವದಂಪತಿ ಯಾವ ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುವುದು ಎಂಬುದರ ಪರಿಶೀಲನೆ ನಡೆಯುತ್ತಿದೆ.
ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!
ದಿನಗೂಲಿ ಕೆಲಸ ಮಾಡುವ ತಂದೆ ನೀಡಿದ ದೂರಿನಲ್ಲಿರುವುದು ಇಷ್ಟು – ನನ್ನ ಮೊದಲನೇ ಪತ್ನಿಯ ಪುತ್ರ, ನನ್ನ ಎರಡನೇ ಪತ್ನಿಯನ್ನು ಅಕ್ರಮವಾಗಿ ವಿವಾಹವಾಗಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಎರಡನೇ ಪತ್ನಿ ನನ್ನ ಜತೆಗೆ ಮನೆಗೆ ಮರಳಲು ನಿರಾಕರಿಸಿದ್ದಾಳೆ. ಆಕೆ ಮನೆಯಿಂದ 20000 ರೂಪಾಯಿ ತೆಗೆದುಕೊಂಡು ಹೋಗಿದ್ದಾಳೆ.
ದೂರು ನೀಡಿದ ತಂದೆಗೆ ಮೊದಲ ಪತ್ನಿಯಲ್ಲಿ ಇಬ್ಬರು ಗಂಡು ಮಕ್ಕಳು. ತಂದೆ ಮರುಮದುವೆ ಆದ ಬಳಿಕ, ಈ ಮಕ್ಕಳು ಅವರಿದ್ದ ಮನೆ ತೊರೆದು ಪ್ರತ್ಯೇಕವಾಗಿ ವಾಸವಿದ್ದರು. ಕೆಲ ವರ್ಷಗಳ ಬಳಿಕ ಕಿರಿಯ ಪುತ್ರ ಮನೆಗೆ ಬಂದು ಹೋಗಿ ಮಾಡಲಾರಂಭಿಸಿದ್ದ. ಆದರೆ, ಕಳೆದ ವರ್ಷ ಮೇ 11ರಂದು ಈ ಮಹಿಳೆ ತವರಿಗೆ ಹೋಗುವುದಾಗಿ ಪತಿಗೆ ತಿಳಿಸಿ ತೆರಳಿದ್ದರು. ಆದರೆ ಹಿಂತಿರುಗಿಲ್ಲ. ವರ್ಷದ ಬಳಿಕ ದೂರುದಾರ ಆಕೆಯ ತವರಿಗೆ ಹೋದಾಗ, ಈ ಮಹಿಳೆ ತನ್ನ ಕಿರಿಯ ಪುತ್ರನನ್ನು ವಿವಾಹವಾಗಿ ಸಂಸಾರ ನಡೆಸುತ್ತಿರುವುದು ಗೊತ್ತಾಗಿದೆ. ಇನ್ನೂ ಈ ಕುರಿತು ಎಫ್‌ಐಆರ್ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.