ಹಲವು ರೋಚಕತೆಯಿಂದ ಕೂಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಪ್ಲೇ ಆಫ್ ಹಂತ ತಲುಪುವುದರಲ್ಲಿದೆ. ಈ ನಡುವೆ ಪ್ಲೇ ಆಫ್‌ಗೆ ಹೋಗಲು ಸಾಧ್ಯವಾಗದೇ ಈ ಆವೃತಿಯಲ್ಲಿ ತನ್ನ ಪಯಣವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಕೊನೆಯಾಗಿಸಿದೆ.
ತನ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ಲಕ್ನೋ ವಿರುದ್ಧ ಸೋತಿತು. ಬುಧವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಶೋನಲ್ಲಿ ರಿಂಕು ಸಿಂಗ್ ಸ್ಟಾರ್ ಆಗಿ ಕಾಣಿಸಿಕೊಂಡರು.
ಕ್ವಿಂಟನ್ ಡಿ ಕಾಕ್ ಅವರ ಅಜೇಯ 140 ರನ್‌ಗಳ ಕೊಡುಗೆ ಇಲ್ಲದಿದ್ದರೆ, ರಿಂಕ್ ಸಿಂಗ್ ಕೇವಲ 15 ಎಸೆತಗಳಲ್ಲಿ 40 ರನ್‌ಗಳ ತ್ವರಿತ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಗೆಲ್ಲಬಹುದಿತ್ತು.
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿಡಲು ಗೆಲುವಿನ ಅಗತ್ಯವಿದೆ ಎಂದು ತಿಳಿದು ಹೋರಾಟ ಮಾಡಿತ್ತು. ತಂಡದ ರಿಂಕು ಸಿಂಗ್ ಲಕ್ನೋ ತಂಡದ ವಿರುದ್ಧ ಅತ್ಯುತ್ತಮ ಪ್ರಯತ್ನ ನೀಡಿದ್ದರು.
ಅವರು ಕೊನೆಯ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ 18 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು. ನಂತರ ಎವಿನ್ ಲೆವಿಸ್ ಅವರ ಉತ್ತಮ ಫೀಲ್ಡಿಂಗ್ ಪ್ರಯತ್ನದ ನಂತರ ಸಿಂಗ್ ಔಟಾದ ಕಾರಣ ಕೆಕೆಆರ್ ಕುಸಿಯಿತು. ಮಾರ್ಕಸ್ ಸ್ಟೊಯಿನಿಸ್ ಕೊನೆಯ ಎಸೆತದಲ್ಲಿ ಉಮೇಶ್ ಯಾದವ್‌ರನ್ನು ಕ್ಲೀನ್ ಬೌಲ್ಡ್ ಮಾಡಿ ಎಲ್‌ಎಸ್‌ಜಿಗೆ 2 ರನ್ ಜಯ ತಂದುಕೊಟ್ಟರು.
ಪಂದ್ಯದ ನಂತರ ಕೆಕೆಆರ್‌ನ ರಿಂಕು ಸಿಂಗ್ ಕಣ್ಣೀರು ಹಾಕಿದ್ದು, ಆ ಘಳಿಗೆಯಲ್ಲಿ ತೆಗೆದ ಫೋಟೋ ಈಗ ನೆಟ್‌ನಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಪ್ರೇಮಿಗಳನ್ನು ಭಾವುಕರನ್ನಾಗಿಸಿದೆ.
https://twitter.com/AkshatOM10/status/1526987214499872768?ref_src=twsrc%5Etfw%7Ctwcamp%5Etweetembed%7Ctwterm%5E1526987214499872768%7Ctwgr%5E%7Ctwcon%5Es1_&ref_url=https%3A%2F%2Fwww.dnaindia.com%2Fcricket%2Freport-ipl-2022-rinku-singh-breaks-down-into-tears-after-kkr-loss-to-lsg-see-pics-2954174