ಶಾಲೆಗೆ ಬೀಫ್ ತಂದ ಆರೋಪದಲ್ಲಿ ಅಸ್ಸಾಂ ಶಾಲೆಯೊಂದರ ಮುಖ್ಯೋಪಾಧ್ಯಾಯನಿ ಜೈಲು ಸೇರಿದ್ದಾರೆ. ಆದರೆ, ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲಾರಂಭಿಸಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ಆಹಾರ ಸೇವಿಸುವ ಹಕ್ಕೂ ಇಲ್ಲವೇ ? ಎಂಬ ಪ್ರಶ್ನೆಗಳು ವ್ಯಕ್ತವಾಗತೊಡಗಿವೆ.
ಅಸ್ಸಾಂನ ಗೋವಲ್ಪರ ಜಿಲ್ಲೆಯ ಲಖಿಪುರ ಪ್ರದೇಶದ ಹುರ್ಕಚುಂಗಿ ಮಾಧ್ಯಮಿಕ ಇಂಗ್ಲೀಷ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಿ ಆಗಿರುವ ಡಾಲಿಮಾ ನೇಸ್ಸಾ ಅವರು ಕಳೆದ ಸೋಮವಾರ ಶಾಲೆಗೆ ಮಧ್ಯಾಹ್ನದ ಊಟಕ್ಕೆಂದು ಬೀಫ್ ತಂದಿದ್ದರು. ಮಾಂಸವನ್ನು ತಾನು ತಿನ್ನುವುದರ ಜೊತೆಗೆ ಸಹೋದ್ಯೋಗಿಗಳಿಗೂ ಹಂಚಿದ್ದರು ಎಂದು ಆರೋಪಿಸಲಾಗಿದೆ.
ಬಿಜೆಪಿ, RSS ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್ ಹಿಂದೂ ದೇಗುಲಗಳ ಬಗ್ಗೆ ಲೇವಡಿ, ಬಿಜೆಪಿ ಆಕ್ರೋಶ
ಆದರೆ, ಸಾರ್ವಜನಿಕವಾಗಿ ಬೀಫ್ ತಿನ್ನುವ ಮೂಲಕ ಶಿಕ್ಷಕಿ ಸಹೋದ್ಯೋಗಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಇದು ಆಕ್ಷೇಪಾರ್ಹವಾಗಿದೆ ಎಂದು ಆರೋಪಿಸಲಾಗಿದ್ದು, ಈ ವಿಚಾರವನ್ನು ಪೊಲೀಸರವರೆಗೆ ಕೊಂಡೊಯ್ಯಲಾಗಿದೆ ಮತ್ತು ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯ ವಿರುದ್ಧ ದೂರನ್ನೂ ನೀಡಿದೆ.
ಈ ದೂರಿನನ್ವಯ ಶಿಕ್ಷಕಿಯ ಮೇಲೆ 153ಎ ಮತ್ತು 295ಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲೆಯ ಆಡಳಿತ ಮಂಡಳಿ, ಮಧ್ಯಾಹ್ನದ ಊಟಕ್ಕೆ ಬೀಫ್ ತಂದಿದ್ದ ಶಿಕ್ಷಕಿ, ಅದನ್ನು ಸಹೋದ್ಯೋಗಿಗಳಿಗೆ ಹಂಚಿದ್ದಾರೆ. ಇದು ಅಪರಾಧ ಎಂದು ತಾನು ನೀಡಿದ ದೂರನ್ನು ಸಮರ್ಥಿಸಿಕೊಂಡಿದೆ.