alex Certify ರಭಸವಾಗಿ ಹರಿಯುತ್ತಿದ್ದ ಕೆರೆ ನೀರಲ್ಲಿ ಕೊಚ್ಚಿ ಹೋದ ಕಾರ್: ಓರ್ವ ಸಾವು, ಅದೃಷ್ಟವಶಾತ್ ಇಬ್ಬರು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಭಸವಾಗಿ ಹರಿಯುತ್ತಿದ್ದ ಕೆರೆ ನೀರಲ್ಲಿ ಕೊಚ್ಚಿ ಹೋದ ಕಾರ್: ಓರ್ವ ಸಾವು, ಅದೃಷ್ಟವಶಾತ್ ಇಬ್ಬರು ಪಾರು

ಬೆಂಗಳೂರು: ರಭಸವಾಗಿ ಹರಿಯುತ್ತಿದ್ದ ಕೆರೆ ನೀರಿನಲ್ಲಿ ಕಾರ್ ಕೊಚ್ಚಿಹೋಗಿದ್ದು ಕಾರ್ ನಲ್ಲಿದ್ದ ಒಬ್ಬರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಇಬ್ಬರು ಪಾರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದೇವರಹೊಸಹಳ್ಳಿ ಕೆರೆಯ ಬಳಿ ಘಟನೆ ನಡೆದಿದೆ. 500 ಮೀಟರ್ ದೂರದಲ್ಲಿ 50 ವರ್ಷದ ವೀರಭದ್ರಪ್ಪನವರ ಮೃತದೇಹ ಪತ್ತೆಯಾಗಿದೆ. ಗ್ರಾಮದ ಕೆರೆ ಕೋಡಿ ಒಡೆದು ರಭಸವಾಗಿ ನೀರು ಹರಿಯುತ್ತಿತ್ತು. ಕಳೆದ ರಾತ್ರಿ ಕೆರೆ ನೀರಿನ ರಭಸಕ್ಕೆ ಕಾರ್ ಕೊಚ್ಚಿ ಹೋಗಿತ್ತು. ಮರ ಹಿಡಿದುಕೊಂಡು ಬಸವರಾಜು ಮತ್ತು ಮೋಹನ್ ಬದುಕುಳಿದಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...