ನವದೆಹಲಿ: ರಸ್ತೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲುಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.
1988 ಡಿ.27ರಂದು ಪಟಿಯಾಲಾದಲ್ಲಿ ನಡೆದಿದ್ದ ರಸ್ತೆ ಜಗಳದಲ್ಲಿ ಗುರ್ನಾಮ್ ಸಿಂಗ್ ಎಂಬುವವರ ಮೇಲೆ ದಾಳಿ ನಡೆದಿತ್ತಲ್ಲದೇ, ಘಟನೆಯಲ್ಲಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಇದೀಗ ಈ ಪ್ರಕರಣ ಸಂಬಂಧ ನವಜೋತ್ ಸಿಂಗ್ ಸಿಧು ಗೆ 1 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
ಬರೋಬ್ಬರಿ 34 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಇದೀಗ ನವಜೋತ್ ಸಿಂಗ್ ಸಿಧುಗೆ ಜೈಲುಶಿಕ್ಷೆ ಪ್ರಕಟಿಸಿದೆ. ಮರುಪರಿಶೀಲನಾ ಅರ್ಜಿಗೂ ಅವಕಾಶ ನೀಡಲಾಗಿದೆ. ಜೈಲು ಶಿಕ್ಷೆ ಪ್ರಕಟ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಸಿಧು ಅವರನ್ನು ವಶಕ್ಕೆ ಪಡೆಯಲಿದ್ದಾರೆ.