ಚಂಡೀಗಢ: ಹರಿಯಾಣದ ಜಜ್ಜರ್ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್(ಕೆಎಂಪಿ) ಎಕ್ಸ್ ಪ್ರೆಸ್ ವೇ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ 10 ಮಂದಿಯನ್ನು ಚಿಕಿತ್ಸೆಗಾಗಿ ರೋಹ್ಟಕ್ ನ ಪೋಸ್ಟ್ ಗ್ರಾಜುಯೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ(ಪಿಜಿಐಎಂಎಸ್) ದಾಖಲಿಸಲಾಗಿದೆ. ಒಬ್ಬರನ್ನು ಚಿಕಿತ್ಸೆಗಾಗಿ ಬಹದ್ದೂರ್ ಗಢ್ ನ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ.
ಮೃತಪಟ್ಟ ಮತ್ತು ಗಾಯಗೊಂಡ ಕಾರ್ಮಿಕರೆಲ್ಲರೂ ಕೆಎಂಪಿ ಎಕ್ಸ್ ಪ್ರೆಸ್ ವೇ ಯಲ್ಲಿ ದುರಸ್ತಿ ಕೆಲಸ ಮಾಡುವವರಾಗಿದ್ದಾರೆ. ಕೆಲಸ ಮುಗಿಸಿದ ನಂತರ ದಣಿದಿದ್ದ ಕಾರ್ಮಿಕರು ರಸ್ತೆ ಬದಿ ಮಲಗಿದ್ದರು. ಅತೀ ವೇಗದಲ್ಲಿ ಬಂದ ಲಾರಿಯೊಂದು ನಿದ್ರಿಸುತ್ತಿದ್ದ ಕಾರ್ಮಿಕರಿಗೆ ಮೇಲೆ ಹರಿದು ದುರಂತ ಸಂಭವಿಸಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಹದ್ದೂರ್‌ಗಢ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.