ಕಾಡ್ಗಿಚ್ಚಿನ ಮುಂದೆ ನಿಂತು ಕ್ಯಾಟ್ ವಾಕ್ ಮಾಡಿದ್ಲು ಟಿಕ್ ಟಾಕ್ ತಾರೆ…! 19-05-2022 6:57AM IST / No Comments / Posted In: Featured News, Live News, Entertainment ಇತ್ತೀಚೆಗೆ ಇನ್ಸ್ಟಾಗ್ರಾಂ, ಟಿಕ್ ಟಾಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳನ್ನು ಹಂಚಿಕೊಳ್ಳಲು ಹಲವಾರು ಮಂದಿ ವಿಭಿನ್ನ ರೀತಿಯಾಗಿರಲು ಇಷ್ಟಪಡುತ್ತಾರೆ. ಇದೀಗ ಪಾಕಿಸ್ತಾನದ ಟಿಕ್ ಟಾಕ್ ತಾರೆ ಹುಮೈರಾ ಅಸ್ಗರ್, ತಮ್ಮ ಟಿಕ್ಟಾಕ್ ವಿಡಿಯೋಗಾಗಿ ಬೆಂಕಿಯಿಂದ ಉರಿಯುತ್ತಿದ್ದ ಅರಣ್ಯದ ಮುಂದೆ ಫೋಸ್ ನೀಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಆಕೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಹುಮೈರಾ ಅಸ್ಗರ್ ವಿಡಿಯೋಗೆ ತಾನು ಎಲ್ಲಿದ್ದರೂ ಬೆಂಕಿ ಸ್ಫೋಟಗೊಳ್ಳುತ್ತದೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾಳೆ. ಉರಿಯುತ್ತಿರುವ ಬೆಟ್ಟದ ಮುಂದೆ ಆಕರ್ಷಕವಾದ ಗೌನ್ ಧರಿಸಿ ಆಕೆ ಕ್ಯಾಟ್ ವಾಕ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಹಂಚಿಕೊಂಡ ನಂತರ ಹುಮೈರಾ ವಿರುದ್ಧ ಬಹಳಷ್ಟು ಅಪಸ್ವರಗಳು ಎದ್ದಿವೆ. ಇದರಿಂದ ಆಕೆ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು ಬೆಂಕಿ ಹಚ್ಚಿಲ್ಲ, ವಿಡಿಯೋ ಮಾಡುವುದರಿಂದ ಯಾವುದೇ ಹಾನಿಯುಂಟಾಗಿಲ್ಲ ಎಂದು ಹೇಳಿದ್ದಾಳೆ. ಬಳಿಕ ವಿಡಿಯೋವನ್ನು ತೆಗೆದುಹಾಕಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, ಇದು ಕ್ರಿಮಿನಲ್ ನಡವಳಿಕೆ ಎಂದು ಕುಪಿತರಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆ ಬೆಂಕಿಯನ್ನು ನಂದಿಸಲು ಮುಂದಾಗಬೇಕಿತ್ತು. ಆದರೆ, ಅದನ್ನು ಮಾಡುವ ಬದಲು ಗ್ಲಾಮರ್ ಆಗಿ ಕ್ಯಾಮರಾಗೆ ಫೋಸ್ ನೀಡಿರುವುದು ಸರಿಯಲ್ಲಾ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ, ಟಿಕ್ಟಾಕ್ನಲ್ಲಿ ಅಸ್ಗರ್ 11 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. This tiktoker from Pakistan has set fire to the forest for 15 sec video. Government should make sure that culprits are punished and the tiktoker along with the brand should be penalised. #Pakistan #TikTok pic.twitter.com/76ad77ULdJ — Discover Pakistan 🇵🇰 | پاکستان (@PakistanNature) May 17, 2022