ನೀವೇನಾದ್ರೂ ಚಿನ್ನ ಖರೀದಿ ಮಾಡುವ ಚಿಂತನೆಯಲ್ಲಿದ್ದರೆ ನಿಮಗಿದು ಸಕಾಲ. ಯಾಕಂದ್ರೆ ಕಳೆದ ಕೆಲವು ತಿಂಗಳುಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆಯಲ್ಲೀಗ ಸಾಕಷ್ಟು ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನದ ಬೆಲೆ 50,105 ರೂಪಾಯಿ ಇದ್ದು, ಬೆಳ್ಳಿ ಪ್ರತಿ ಕೆಜಿಗೆ 60,885 ರೂಪಾಯಿ ಆಗಿದೆ. ಬುಲಿಯನ್ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಕುಸಿತವಾಗಿದೆ.
ಎಂಸಿಎಕ್ಸ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿ ಬಂಗಾರದ ದರ ಕನಿಷ್ಠ ಮಟ್ಟಕ್ಕೆ ಬಂದಿದೆ. ಹಾಗಾಗಿ ತಜ್ಞರು ಕೂಡ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎನ್ನುತ್ತಿದ್ದಾರೆ. ಬಡ್ಡಿ ದರ ಏರಿಕೆಯಿಂದ ಚಿನ್ನದ ಬೆಲೆ ಇಳಿಕೆಯಾಗಿದೆ.
ಇವತ್ತು 23 ಕ್ಯಾರೆಟ್ ಚಿನ್ನ 10 ಗ್ರಾಂಗೆ 50,096 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46072 ರೂಪಾಯಿಗೆ ಇಳಿಕೆ ಕಂಡಿದೆ. ಅದೇ ರೀತಿ 20 ಕ್ಯಾರೆಟ್ ಚಿನ್ನದ ಬೆಲೆ 37,723 ರೂಪಾಯಿಗೆ ತಲುಪಿದ್ದು, 14 ಕ್ಯಾರೆಟ್ ನ ಬಂಗಾರ 10 ಗ್ರಾಂಗೆ 29,424 ರೂಪಾಯಿ ಆಗಿದೆ. IBJA ದರದ ಹೊರತಾಗಿ ಶೇ.3ರಷ್ಟು GSTಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.