ಅಕ್ಷರ ಮಾಲೆಗಳನ್ನು ತಪ್ಪಿಲ್ಲದೇ ಹೇಳುವವರ ಸಂಖ್ಯೆ ವಿರಳ. ಗೊತ್ತಿದ್ದರೂ ಹೇಳುವಾಗ ಅಲ್ಲಲ್ಲಿ ತೊದಲಿಸುವವರೇ ಹೆಚ್ಚಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲೆ ಇಂಗ್ಲೀಷ್ ವರ್ಣಮಾಲೆಯನ್ನು ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ದಾಖಲೆ ಬರೆದಿದ್ದಾಳೆ.
ಇದರಲ್ಲೇನು ವಿಶೇಷವಿದೆ ಬಿಡಿ ಎಂದು ಮೂಗು ಮುರಿಯಬೇಡಿ. ಕೇವಲ 5 ವರ್ಷದ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗೋವಾಲ್ಟೋರ್ ನ ಆತ್ರೇಯಿ ಘೋಷ್ ಎಂಬ ಈ ಬಾಲಕಿ ಇಂಗ್ಲೀಷ್ ವರ್ಣಮಾಲೆಯನ್ನು ಹಿಂದಿನಿಂದ ಅಂದರೆ Z ನಿಂದ A ವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದಾಳೆ.
ಪ್ರೇಯಸಿಯನ್ನ ನೋಡಲು ಬಂದ ಪ್ರಿಯಕರ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ನಂತರ ನಡೆದಿದ್ದೇನು….?
ಪೊಲೀಸ್ ಅಧಿಕಾರಿಯಾಗಿರುವ ಅನಿರುದ್ಧ ಘೋಷ್ ಅವರ ಮಗಳಾಗಿರುವ ಆತ್ರೇಯಿ ಹಾಡುಗಾರಿಕೆ, ನೃತ್ಯ ಮತ್ತು ಓದುವುದರಲ್ಲಿ ನಿಸ್ಸೀಮಳಾಗಿದ್ದಾಳೆ. 23 ಸೆಕೆಂಡುಗಳಲ್ಲಿ ವರ್ಣಮಾಲೆಯನ್ನು ಹೇಳುವ ದೃಶ್ಯವನ್ನು ತಾಯಿ ಸಂಪತಿ ಘೋಷ್ ಸೆರೆ ಹಿಡಿದಿದ್ದಾರೆ.
ಈ ವರ್ಷದ ಆರಂಭದಲ್ಲಿ ಇಂಡಿಯನ್ ಅಲ್ಟ್ರಾ ರನ್ನರ್ ಸುಫಿಯಾ ಖಾನ್ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೆದ್ದಾರಿಯಲ್ಲಿ ಓಡಿ ಗಿನ್ನಿಸ್ ದಾಖಲೆ ಮಾಡಿದ್ದರು. ಸುಫಿಯಾ 6,002 ಕಿಲೋಮೀಟರ್ ದೂರವನ್ನು 110 ದಿನ 23 ಗಂಟೆ ಮತ್ತು 24 ಸೆಕೆಂಡುಗಳಲ್ಲಿ ಕ್ರಮಿಸಿ ಗಿನ್ನಿಸ್ ದಾಖಲೆ ಮಾಡಿ ಸಾಧನೆಗೈದಿದ್ದರು.