alex Certify ಚಾಲನೆ ಗೊತ್ತಿಲ್ಲದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅನುಭವ ಬಿಚ್ಚಿಟ್ಟ ಪ್ರಯಾಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲನೆ ಗೊತ್ತಿಲ್ಲದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅನುಭವ ಬಿಚ್ಚಿಟ್ಟ ಪ್ರಯಾಣಿಕ

ಸಾಮಾನ್ಯ ಜ್ಞಾನವೊಂದಿದ್ದರೆ ಎಂತಹ ಸಂಕಷ್ಟ ಪರಿಸ್ಥಿತಿಯನ್ನೂ ಎದುರಿಸಬಹುದು. ಆ ಪರಿಸ್ಥಿತಿಗೆ ತಕ್ಕಂತೆ ಬುದ್ಧಿ ಉಪಯೋಗಿಸಿದರೆ ಸಂಕಷ್ಟದಿಂದ ಪಾರಾಗಬಹುದು, ಉಳಿದವರನ್ನೂ ಪಾರು ಮಾಡಬಹುದಾಗಿದೆ.

ಇದಕ್ಕೊಂದು ಇತ್ತೀಚಿನ ಸ್ಪಷ್ಟ ನಿದರ್ಶನವೆಂದರೆ, ವಿಮಾನ ಚಾಲನೆಯ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದ ವ್ಯಕ್ತಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿತ್ತು.

ಯುಎಸ್ ನ ಫ್ಲೋರಿಡಾ ಬಾನಲ್ಲಿ ಈ ಘಟನೆ ನಡೆದಿದೆ. ಬಹಮಾಸ್ ನಿಂದ ಫ್ಲೋರಿಡಾಗೆ ಬರುವ ಮಾರ್ಗಮಧ್ಯದಲ್ಲಿ ಪೈಲಟ್ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಆಗ ತನಗೆ ವಿಮಾನವನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಪ್ರಯಾಣಿಕರ ಗಮನಕ್ಕೆ ತಂದಿದ್ದಾರೆ.

ಕೂಡಲೇ 39 ವರ್ಷದ ಡೆರೇನ್ ಹ್ಯಾರಿಸನ್ ಎಂಬ ಪ್ರಯಾಣಿಕ ಪೈಲಟ್ ಬಳಿ ಹೋಗಿ ಸುರಕ್ಷಿತ ಲ್ಯಾಂಡಿಂಗ್ ಮಾಡಲು ಈಗ ಏನು ಮಾಡಬೇಕು ಎಂದು ಕೇಳುವಷ್ಟರಲ್ಲಿ ಪೈಲಟ್ ಪ್ರಜ್ಞಾಹೀನರಾಗಿದ್ದಾರೆ.

ಮಾಸಿಕ ದೂರವಾಣಿ ಭತ್ಯೆ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ಸೇರಿ ವೇತನ ಹೆಚ್ಚಳದೊಂದಿಗೆ ಶಾಸಕರಿಗೆ ಬಂಪರ್ ಭತ್ಯೆ

ಆಗ ವಿಮಾನದಲ್ಲಿದ್ದವರಿಗೆಲ್ಲಾ ಸಾವು-ಬದುಕಿನ ನಡುವೆ ಇದ್ದೇವೆ ಎಂದು ಭಾಸವಾಗಿದೆ. ಆ ವೇಳೆಗಾಗಲೇ ಸಮುದ್ರದ ಮಧ್ಯಭಾಗದ ಬಾನಲ್ಲಿ ವಿಮಾನದ ವೇಗ ಹೆಚ್ಚಾಗಿತ್ತು. ತಡ ಮಾಡದ ಹ್ಯಾರಿಸನ್ ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಚಾಲನಾ ಸ್ಥಳದಲ್ಲಿದ್ದ ಸೂಚನೆಗಳನ್ನು ಗ್ರಹಿಸಿಕೊಂಡು ನಿಧಾನವಾಗಿ ವಿಮಾನದ ವೇಗವನ್ನು ಕಡಿಮೆ ಮಾಡುತ್ತಾ ಫ್ಲೋರಿಡಾ ಬಳಿಗೆ ತಂದಿದ್ದಾರೆ.

ಪೈಲಟ್ ನ ಹೆಡ್ ಸೆಟ್ ಹಾಕಿಕೊಂಡು ಸಹ ಪೈಲಟ್ ನಿಂದ ಮತ್ತು ಏರ್ ಟ್ರಾಫಿಕ್ ಸಿಬ್ಬಂದಿಯ ಸಂಪರ್ಕ ಸಾಧಿಸಿ ಅವರು ನೀಡಿದ ಸೂಚನೆಗಳನ್ನು ಅನುಸರಿಸುತ್ತಾ ವಿಮಾನವನ್ನು ಚಲಾಯಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯಾರಿಸನ್, ಸಾವು-ಬದುಕಿನ ದವಡೆಯಲ್ಲಿ ಸಿಲುಕಿದ್ದ ನಾನು ಗೊಂದಲಕ್ಕೀಡಾಗಲಿಲ್ಲ. ನನ್ನ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಏರ್ ಟ್ರಾಫಿಕ್ ಸಿಬ್ಬಂದಿ ಮತ್ತು ಸಹ ಪೈಲಟ್ ನೀಡಿದ ನಿರ್ದೇಶನದಂತೆ ನಾನು ನಿಧಾನವಾಗಿ ವಿಮಾನವನ್ನು ಲ್ಯಾಂಡ್ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...