ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಟಿ20 ಕ್ರಿಕೆಟ್ ನಲ್ಲಿ 250 ವಿಕೆಟ್ ಗಳನ್ನು ಪಡೆದ ಭಾರತದ ಪ್ರಥಮ ವೇಗದ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಬೌಲ್ಡ್ ಮಾಡಿದ ಅವರು 250ನೇ ವಿಕೆಟ್ ಗಳಿಸಿದ್ದಾರೆ. 28 ವರ್ಷದ ಬೂಮ್ರಾ 206 ಟಿ20 ಪಂದ್ಯಗಳನ್ನಾಡಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ನಾಲ್ವರು ಭಾರತೀಯರು 250ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರೆಲ್ಲರೂ ಸ್ಪಿನ್ನರ್ ಗಳು. ಆರ್. ಅಶ್ವಿನ್ 274 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದು, ಯಜುವೇಂದ್ರ ಚಹಾಲ್ 271, ಪಿಯುಷ್ ಚಾವ್ಲ 270, ಅಮಿತ್ ಮಿಶ್ರಾ 262 ವಿಕೆಟ್ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ನ ಡೇನ್ ಬ್ರಾವೋ ಟಿ20ಯಲ್ಲಿ 587 ವಿಕೆಟ್ ಪಡೆದಿದ್ದು, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ವೇಗದ ಬೌಲರ್ ಗಳಲ್ಲಿ ಜಸ್ಪ್ರೀತ್ ಬೂಮ್ರಾ 250, ಭುವನೇಶ್ವರ್ ಕುಮಾರ್ 223, ಜಯದೇವ ಉನ್ಕದತ್ 201, ವಿನಯ್ ಕುಮಾರ್ 194, ಇರ್ಫಾನ್ ಪಠಾಣ್ 173 ವಿಕೆಟ್ ಗಳಿಸಿದ್ದಾರೆ.