ಹರಿಯಾಣದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಬುಧವಾರ ಮುಂಜಾನೆ ಹರಿಯಾಣದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆ ದಾಖಲಾಗಿದೆ.
ಬೆಳಿಗ್ಗೆ 6.08 ಕ್ಕೆ ಭೂಕಂಪನದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಜಜ್ಜರ್ನಿಂದ ನೈಋತ್ಯಕ್ಕೆ 42 ಕಿ.ಮೀ. ದೂರದಲ್ಲಿ ಕಂಡು ಬಂದಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಈ ವಾರದ ಆರಂಭದಲ್ಲಿ ಮೇಘಾಲಯ ಮತ್ತು ಅಸ್ಸಾಂನಲ್ಲಿ ತಲಾ 3.9 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದವು.