ಬೆಂಗಳೂರು: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಿವೃತ್ತ ಚಾಲಕರನ್ನು ಮೂರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಸೇವೆಗೆ ಪಡೆದುಕೊಳ್ಳಲು ಕೆಎಸ್ಆರ್ಟಿಸಿ ಮುಂದಾಗಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಿಗಮದಲ್ಲಿ ಸಿಬ್ಬಂದಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ 63 ವರ್ಷ ಮೀರದ ನಿವೃತ್ತ ಚಾಲಕರಿಗೆ ಮತ್ತೆ ನೌಕರಿ ನೀಡಲಾಗುತ್ತದೆ. 8 ಗಂಟೆ ಉದ್ಯೋಗ ಮಾಡುವ ನಿವೃತ್ತ ನೌಕರರಿಗೆ ಪ್ರತಿದಿನ 1000 ರೂ. ಗೌರವಧನ ನೀಡಲಾಗುವುದು ಎಂದು ಹೇಳಲಾಗಿದೆ.
63 ವರ್ಷ ಮೀರದ ನಿವೃತ್ತ ಚಾಲಕರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದಾಗಿದೆ. ವೈದ್ಯರು ನೀಡಿದ ದೃಷ್ಟಿ ಸಾಮರ್ಥ್ಯ ಪತ್ರ, ಭಾರಿ ವಾಹನ ಚಾಲನಾ ಪರವಾನಿಗೆ ಪತ್ರದೊಂದಿಗೆ ಮಂಗಳೂರು, ಚಾಮರಾಜನಗರ, ಪುತ್ತೂರು, ರಾಮನಗರ ವಿಭಾಗಗಳಲ್ಲಿ ಆಸಕ್ತ ನಿವೃತ್ತರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬಹುದಾಗಿದೆ.
ಸಿಬ್ಬಂದಿಗೆ ಪ್ರತಿದಿನ 8 ಗಂಟೆ ಕೆಲಸಕ್ಕೆ 1000 ಗೌರವಧನ ನೀಡಲಿದ್ದು, ಹೆಚ್ಚುವರಿ ಕಾರ್ಯನಿರ್ವಹಿಸಿದಲ್ಲಿ ಪ್ರತಿ ಗಂಟೆಗೆ 125 ರೂಪಾಯಿ ಭತ್ಯೆ ನೀಡಲಾಗುತ್ತದೆ. ಸಾರಿಗೆ ಆದಾಯದ ಮೇಲೆ ಶೇಕಡ 1 ರಷ್ಟು ಪ್ರೋತ್ಸಾಹಧನ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.