ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ತಮಾಷೆ ಮಾಡಿದ ಐಎಎಸ್ ಅಧಿಕಾರಿ; ನೆಟ್ಟಿಗರು ಸಿಡಿಮಿಡಿ 18-05-2022 8:43AM IST / No Comments / Posted In: Featured News, Live News, Sports ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಬಗ್ಗೆ ಮಾಡಿದ ಟ್ವೀಟ್ಗಾಗಿ ಐಎಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಸರಿಯಾಗಿ ಝಾಡಿಸಿದ್ದಾರೆ. ಬ್ಯಾಂಕಾಕ್ನಲ್ಲಿ ನಡೆದ ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಗೋಲುಗಳಿಂದ ಥಾಮಸ್ ಕಪ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಹೊಸ ಇತಿಹಾಸ ಬರೆದಿದೆ. ಸೋಮೇಶ್ ಉಪಾಧ್ಯಾಯ ಅವರು ಟ್ವಿಟ್ಟರ್ನಲ್ಲಿ ಈ ಗೆಲುವಿನ ಬಗ್ಗೆ ತಮಾಷೆಯನ್ನು ಹಂಚಿಕೊಂಡಿದ್ದಾರೆ. ಅಧಿಕಾರಿಯು, ಭಾರತೀಯರ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸೊಳ್ಳೆಗಳನ್ನು ಕೊಲ್ಲುವ ಬ್ಯಾಟ್ನ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದು ಭಾರತದ ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ. ಭಾರತೀಯರು ಅವರಿಗಿಂತ ಬ್ಯಾಡ್ಮಿಂಟನ್ನಲ್ಲಿ ಹೇಗೆ ಉತ್ತಮರಾಗಿದ್ದಾರೆಂದು ಇಂಡೋನೇಷಿಯನ್ನರು ಆಶ್ಚರ್ಯ ಪಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಆದರೆ, ಈ ಜೋಕ್ ನೆಟ್ಟಿಗರಿಗೆ ಹಿಡಿಸಲಿಲ್ಲ. ಐಎಎಸ್ ಅಧಿಕಾರಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಜೋಕ್ಗಳು ಆನಂದದಾಯಕವಾಗಿರುತ್ತದೆ. ಆದರೆ, ಇದು ತಮಾಷೆಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಸ್ಯವನ್ನು ಸರಿಯಾಗಿ ಬಳಸುವುದು ಬುದ್ಧಿವಂತಿಕೆಯಾಗಿದೆ. ಆದರೆ, ಇದು ಮೂರ್ಖತನವಾಗಿದೆ ಎಂದು ಹೇಳಿದ್ದಾರೆ. ನೀವು ಐಎಎಸ್ ಆಗಿದ್ದು ಹೇಗೆ ಎಂದು ಭಾರತೀಯರಿಗೂ ಆಶ್ಚರ್ಯವಾಗಿದೆ ಅಂತೆಲ್ಲಾ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. https://twitter.com/Somesh_IAS/status/1525881416248008705?ref_src=twsrc%5Etfw%7Ctwcamp%5Etweetembed%7Ctwterm%5E1525881416248008705%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fias-officer-roasted-for-distasteful-joke-on-indian-badminton-team-winning-thomas-cup-5192221.html It's quiet Shameful that such thing are stated by an IAS officerJokes are good and enjoyable but this is not funny,It's just like WOMEN winning HOCKEY because they use to give "JHAADU" in their house https://t.co/UfaeG99P9G — Priya 🌸❄ (@priya_jajoo) May 17, 2022