ಕೋವಿಡ್ ಪರಿಹಾರ ನಿಧಿಯು ತಪ್ಪಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಇದರಿಂದ ಆತ ಪರಿಹಾರ ನಿಧಿಯೊಂದಿಗೆ ಪಲಾಯನ ಮಾಡಿರುವ ಘಟನೆ ಜಪಾನ್ ನಲ್ಲಿ ನಡೆದಿದೆ.
ಜಪಾನ್‌ನ ಚುಗೋಕು ಪ್ರದೇಶದ ಅಬು ಎಂಬ ಪಟ್ಟಣದಲ್ಲಿ, 460 ಕ್ಕೂ ಹೆಚ್ಚು ಕುಟುಂಬಗಳಿಗೆ 1,00,000 ಯೆನ್‌ನ ಕೋವಿಡ್ ಪರಿಹಾರ ನಿಧಿಯನ್ನು ನೀಡಬೇಕಾಗಿತ್ತು. ಆದರೆ, ಈ 463 ಮನೆಗಳ ಬದಲಿಗೆ, ಎಲ್ಲಾ ಹಣವನ್ನು ತಪ್ಪಾಗಿ ಒಂದೇ ಖಾತೆಗೆ ವರ್ಗಾಯಿಸಲಾಗಿದೆ
24 ವರ್ಷ ವಯಸ್ಸಿನ ವ್ಯಕ್ತಿಯ ಖಾತೆಗೆ ತಪ್ಪಾಗಿ ಹಣ ವರ್ಗಾವಣೆಯಾಗಿದೆ 46.3 ಮಿಲಿಯನ್ ಯೆನ್ (ಅಂದಾಜು ರೂ. 2 ಕೋಟಿ) ನೊಂದಿಗೆ ನಾಪತ್ತೆಯಾಗಿದ್ದಾನೆ. ಹೀಗಾಗಿ ಅಧಿಕಾರಿಗಳು ಆತನ ವಿರುದ್ಧ ಮೊಕದ್ದಮೆ ಹೂಡಿದ್ದು, ಒಟ್ಟು 51.16 ಮಿಲಿಯನ್ ಯೆನ್ (ಸುಮಾರು ರೂ. 3 ಕೋಟಿ) ನಷ್ಟವನ್ನು ಮಾತ್ರವಲ್ಲದೆ ಕಾನೂನು ಶುಲ್ಕವನ್ನು ಸಹ ಪಡೆಯಲು ಮುಂದಾಗಿದ್ದಾರೆ. ಆದರೆ, ಇಷ್ಟರಲ್ಲಾಗಲೇ ಆ ವ್ಯಕ್ತಿ ತನ್ನ ಮನೆಯನ್ನು ತೊರೆದು ಬೇರೆಡೆ ಪಲಾಯನಗೈದಿದ್ದಾನೆ.
ವ್ಯಕ್ತಿಯು ಹಣವನ್ನು ಪಡೆದ ನಂತರ, ಎರಡು ವಾರಗಳವರೆಗೆ ಗಮನಕ್ಕೆ ಬಾರದಂತೆ ಬೇರೆ ಬ್ಯಾಂಕ್ ಖಾತೆಗೆ ಹಣವನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ವರ್ಗಾಯಿಸಿದ್ದಾನೆ. ಅಧಿಕಾರಿಗಳಿಗೆ ಈ ವಿಚಾರ ತಿಳಿಯುವಾಗ ಇನ್ಮುಂದೆ ಈ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿದೆ. ಸದ್ಯ, ಆತನ ವಿರುದ್ಧ ಮೊಕದ್ದಮೆ ದಾಖಲಾಗಿದ್ರೆ, ವ್ಯಕ್ತಿ ಮಾತ್ರ ನಾಪತ್ತೆಯಾಗಿದ್ದಾನೆ.