ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ ಮಾಡಬಹುದು. ಇದರಿಂದ ಮಗುವಿನ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಖರ್ಚು ಕೂಡ ಕಡಿಮೆ.
2 ಟೇಬಲ್ ಸ್ಪೂನ್ ಹಾಲು, 1 ಸ್ಪೂನ್ ಕಡಲೆ ಹಿಟ್ಟು, 1 ಟೀ ಸ್ಪೂನ್ ಅರಿಶಿನ ಇವಿಷ್ಟನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮಗುವಿನ ಮುಖ, ದೇಹಕ್ಕೆ ಹಚ್ಚಿ. 10 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಮುಖ ಕಾಂತಿಯಿಂದ ಹೊಳೆಯುತ್ತದೆ. ಗಂಡು ಮಕ್ಕಳಿಗೆ ಅರಿಶಿನ ಬೇಡ. ಹಾಲು ಕಡಲೆ ಹಿಟ್ಟು ಮಾತ್ರ ಬಳಸಿದರೆ ಸಾಕು.
ಹೆದ್ದಾರಿ ಕಾಮಗಾರಿ ಸ್ಥಳದಲ್ಲೇ ಮೊಟ್ಟೆಗಳಿಗೆ ಕಾವು ಕೊಟ್ಟ ಹೆಬ್ಬಾವು: ಮರಿ ಹೊರಬರಲು 54 ದಿನ ಕೆಲಸ ಸ್ಥಗಿತ
ಇನ್ನು ಎಣ್ಣೆ ಮಸಾಜ್ ಮಾಡುವುದರಿಂದ ಕೂಡ ಮಗುವಿನ ಮುಖದ ಕಾಂತಿ ಹೆಚ್ಚಿಸಬಹುದು. ಎಣ್ಣೆಯನ್ನು ತುಸು ಬಿಸಿ ಮಾಡಿಕೊಳ್ಳಿ. ಮುಖ, ಕೈ ಕಾಲು ಎಲ್ಲಾ ಭಾಗಕ್ಕೆ ನಿಧಾನಕ್ಕೆ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಮಗುವಿನ ಚರ್ಮ ಕೂಡ ಮೃದುವಾಗುತ್ತೆ.
ಶ್ರೀಗಂಧ ಕೂಡ ತ್ವಚೆಯ ರಕ್ಷಣೆಗೆ ಸಹಾಯಕಾರಿಯಾಗಿದೆ. ಶ್ರೀಗಂಧದ ಪುಡಿಗೆ ಸ್ವಲ್ಪ ಅರಿಶಿನ, ಕೇಸರಿ ಹಾಲು (ಕೇಸರಿಯನ್ನು ಸ್ವಲ್ಪ ಹಾಲಿನಲ್ಲಿ ನೆನೆಸಿಡಿ) ಇವಿಷ್ಟನ್ನು ಸೇರಿಸಿ ಮಿಶ್ರಣ ಮಾಡಿ. ಇದರ ಪ್ಯಾಕ್ ಅನ್ನು ಮಗುವಿಗೆ ಹಚ್ಚಿ. ಕಣ್ಣಿನ ಬಳಿ ಹಚ್ಚುವಾಗ ಜಾಗ್ರತೆ ವಹಿಸಿ. 10 ನಿಮಿಷ ಬಿಟ್ಟು ತೊಳೆಯಿರಿ.
ಮುಂಜಾನೆ ಹಾಗೂ ಮುಸ್ಸಂಜೆ ಹೊತ್ತು ಸೂರ್ಯನ ಕಿರಣಗಳಿಗೆ ಮಗುವಿನ ಮೈಯೊಡ್ಡಿ. ಇದರಿಂದ ವಿಟಮಿನ್ ಡಿ ಸಿಗುತ್ತದೆ. ತ್ವಚೆಯೂ ಚೆನ್ನಾಗಿ ಆಗುತ್ತದೆ.