ಕೋವಿಡ್-19 ರ ಲಸಿಕೆ ಕೊರ್ಬೆವ್ಯಾಕ್ಸ್ ನ ದರವನ್ನು 840 ರೂಪಾಯಿಗಳಿಂದ 250 ರೂಪಾಯಿಗಳಿಗೆ ಕಡಿಮೆ ಮಾಡಲಾಗಿದೆ ಎಂದು ಬಯೋಲಾಜಿಕಲ್ ಇ ಲಿಮಿಟೆಡ್ ಸಂಸ್ಥೆ ತಿಳಿಸಿದೆ.
ಆದರೆ, ಸಾರ್ವಜನಿಕರು ಇದಕ್ಕೆ ತೆರಿಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳು ಸೇರಿದರೆ ಒಂದು ಡೋಸ್ ಗೆ 400 ರೂಪಾಯಿ ತೆರಬೇಕಾಗುತ್ತದೆ. 5 ರಿಂದ 12 ವರ್ಷದ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಪೂರೈಕೆ ಮಾಡಲು ಭಾರತೀಯ ಔಷಧ ನಿಯಂತ್ರಕರ ಇಲಾಖೆ ಬಯೋಲಾಜಿಕಲ್ ಇ ಕಂಪನಿಗೆ ಕಳೆದ ಏಪ್ರಿಲ್ ನಲ್ಲಿ ಅನುಮತಿ ನೀಡಿತ್ತು.
ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ
ಪ್ರಸ್ತುತ ಕಂಪನಿಯು 12-14 ವಯೋಮಾನದ ಮಕ್ಕಳಿಗೆ ಲಸಿಕೆಯನ್ನು ಪೂರೈಸುತ್ತಿದೆ. ಕಂಪನಿಯು ಸುಮಾರು 30 ಕೋಟಿ ಡೋಸ್ ಗಳನ್ನು ಉತ್ಪಾದನೆ ಮಾಡಿದ್ದು, ಈ ಪೈಕಿ ಈಗಾಗಲೇ 10 ಕೋಟಿ ಡೋಸ್ ಗಳನ್ನು ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡಿದೆ. ಪ್ರಸ್ತುತ 12-15 ನೇ ವಯೋಮಾನದ ಮಕ್ಕಳಿಗೆ 3 ಕೋಟಿಗೂ ಅಧಿಕ ಕೊರ್ಬೆವ್ಯಾಕ್ಸ್ ಡೋಸ್ ಗಳನ್ನು ನೀಡಲಾಗಿದೆ.