
ಐಎಎಫ್ನ ನಿವೃತ್ತ ಪೈಲಟ್ ಒಬ್ಬರು ಸಿನಿಮಾದ ಹೊಡೆದಾಟದ ದೃಶ್ಯವೊಂದರಲ್ಲಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ನಿವೃತ್ತ ಗ್ರೂಪ್ ಕ್ಯಾಪ್ಟನ್ ಶಿವರಾಮನ್ ಸಜನ್ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯ್ ಯುದ್ಧ ವಿಮಾನವನ್ನು ಹಾರಿಸುತ್ತಿರುವುದನ್ನು ಮತ್ತು ಕೆಲವು ಗೂಂಡಾಗಳು ಮುಖಾಮುಖಿ ಡಿಕ್ಕಿಯಲ್ಲಿ ಸ್ಫೋಟಿಸುತ್ತಿರುವುದನ್ನು ಸಿನಿಮಾದ ದೃಶ್ಯವೊಂದರಲ್ಲಿ ನೋಡಬಹುದು. ತನಗೆ ತುಂಬಾ ಪ್ರಶ್ನೆಗಳಿವೆ ಎಂಬ ಸರಳ ಶೀರ್ಷಿಕೆಯೊಂದಿಗೆ ಸಜನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಹಲವಾರು ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದೆ. ಭಾರತೀಯ ಸಿನಿಮಾಗಳಲ್ಲಿ ನಾಯಕನನ್ನು ಸೂಪರ್ ಹೀರೋ ಎಂದು ಬಿಂಬಿಸುವುದು ಸಾಮಾನ್ಯವಾಗಿದೆ. ಈ ದೃಶ್ಯವು ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ರೀತಿಯ ದೃಶ್ಯ ತೋರಿಸಿರುವಲ್ಲಿ ಬೀಸ್ಟ್ ಏನು ಪ್ರಥಮ ಸಿನಿಮಾವಲ್ಲ ಎಂದು ಹಲವರು ಬರೆದಿದ್ದಾರೆ.
ಬೀಸ್ಟ್ ಚಲನಚಿತ್ರವು ಏಪ್ರಿಲ್ 13 ರಂದು ಬಿಡುಗಡೆಯಾಯಿತು. ಈ ಸಿನಿಮಾವನ್ನು ವೀಕ್ಷಿಸಲು ಮೊದಲ ವಾರದಲ್ಲಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಮೊದಲ ವಾರದ ಅಂತ್ಯದ ವೇಳೆಗೆ ಕೆಜಿಎಫ್-2 ಘರ್ಜನೆಗೆ ಬೀಸ್ಟ್ ಕೊಚ್ಚಿಕೊಂಡು ಹೋಯಿತು.