ಮಾವು ಪ್ರಿಯರಿಗೆ ಸಿಹಿ ಸುದ್ದಿ: ಮನೆ ಬಾಗಿಲಿಗೆ ಹಣ್ಣು ತಲುಪಿಸುವ ಯೋಜನೆಗೆ ಮತ್ತೆ ಚಾಲನೆ 17-05-2022 9:00AM IST / No Comments / Posted In: Agriculture, Agriculture News, Karnataka, Latest News, Live News ಇದು ಹಣ್ಣುಗಳ ರಾಜ ಮಾವುಗಳ ಸೀಸನ್. ಮಾವಿನ ಹಣ್ಣುಗಳನ್ನು ಅತಿಯಾಗಿ ಇಷ್ಟಪಡುವವರಿಗೆಂದೇ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ತಂದಿದೆ. ಸರ್ಕಾರವು ತನ್ನ ಗ್ರಾಹಕರಿಗೆ ವಿವಿಧ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ಪೋರ್ಟಲ್ ತೆರೆದಿದೆ. ಆತ್ಮೀಯ ಗ್ರಾಹಕರೇ, 2022ರ ಮೇ 16ರಿಂದ ಮಾವು ಪೋರ್ಟಲ್ ತೆರೆಯಲು ನಾವು ಸಂತಸ ವ್ಯಕ್ತಪಡಿಸುತ್ತಿದ್ದೇವೆ. ಈ ವರ್ಷ ಮಾವಿನ ಸೀಸನ್ ಒಂದು ತಿಂಗಳು ವಿಳಂಬವಾಗಿದೆ. ಆದರೆ ಈ ಮಾವುಗಳ ಪೋರ್ಟಲ್ ಆಗಸ್ಟ್ ತಿಂಗಳವರೆಗೂ ಮುಂದುವರಿಯಲಿದೆ ಎಂದು ಪೋರ್ಟಲ್ನಲ್ಲಿ ಶೀರ್ಷಿಕೆ ನೀಡಲಾಗಿದೆ. ವೆಬ್ಸೈಟ್ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ಈ ವೆಬ್ಸೈಟ್ ಆರಂಭಿಸಲಾಗಿದೆ. ಈ ಪೋರ್ಟಲ್ ಸಹಾಯದಿಂದ ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸಲಾಗುತ್ತಿದೆ. ಪೋರ್ಟಲ್ನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಇಡಲಾಗಿದೆ. ಅಲ್ಫಾನ್ಸೋ, ಬಾದಾಮಿ, ಅಪೂಸ್, ರಸ್ಪುರಿ, ಮಲ್ಲಿಕಾ, ಹಿಮಾಮ್ ಪಸಂದ್ ಹಾಗೂ ಕೇಸರ್ ಸೇರಿದಂತೆ ವಿವಿಧ ಹಣ್ಣುಗಳು ಲಭ್ಯವಿದೆ. ಕೆಎಸ್ಎಂಡಿಎಂಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಈ ವಿಚಾರವಾಗಿ ಮಾತನಾಡಿದ್ದು, ಕಳೆದ 2 ವರ್ಷಗಳಿಂದ ರೈತರು ಹಾಗೂ ಗ್ರಾಹಕರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ. ಇಂತಹ ಉಪಕ್ರಮವನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2020 ರಿಂದಲೂ ಈ ಪೋರ್ಟಲ್ ಲಭ್ಯವಿದೆ ಎಂದಿದ್ದಾರೆ.