alex Certify ಸರ್ಕಾರಿ ಶಾಲೆ ಸರಿಯಿಲ್ಲ ನನ್ನನ್ನು ಖಾಸಗಿ ಶಾಲೆಗೆ ಸೇರಿಸಿ ಎಂದು ಬಿಹಾರ ಸಿಎಂಗೆ ಮನವಿ ಮಾಡಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆ ಸರಿಯಿಲ್ಲ ನನ್ನನ್ನು ಖಾಸಗಿ ಶಾಲೆಗೆ ಸೇರಿಸಿ ಎಂದು ಬಿಹಾರ ಸಿಎಂಗೆ ಮನವಿ ಮಾಡಿದ ಬಾಲಕ

ಈ 11 ವರ್ಷದ ಪೋರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮನ ಗೆದ್ದಿದ್ದಾನೆ. ಶನಿವಾರ ನಿತೀಶ್ ಕುಮಾರ್ ತಮ್ಮ ಪೂರ್ವಜರ ಊರಾದ ನಳಂದ ಜಿಲ್ಲೆಯ ಕಲ್ಯಾಣ್ ಬಿಗಾಹಗೆ ಭೇಟಿ ನೀಡಿದ್ದರು. ಭಾರೀ ಜನಸ್ತೋಮವೇ ಅಲ್ಲಿ ಸೇರಿತ್ತು. ಈ ಜನಸ್ತೋಮದ ಮಧ್ಯೆಯೇ ಹರಸಾಹಸ ಮಾಡುತ್ತ ಸೋನು ಎಂಬ ಈ ಪೋರ ನಿತೀಶ್ ಕುಮಾರ್ ಅವರನ್ನು ಖುದ್ದಾಗಿ ಭೇಟಿಯೂ ಆಗಿದ್ದಾನೆ.

ಈ ಹರಸಾಹಸ ಮಾಡಿ ಭೇಟಿ ಆಗಲು ಒಂದು ಜ್ವಲಂತ ಸಮಸ್ಯೆ ಕಾರಣವಾಗಿತ್ತು. ಅದೆಂದರೆ, 4 ನೇ ತರಗತಿಯಲ್ಲಿ ಓದುತ್ತಿರುವ ಸೋನುಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿ ಇಲ್ಲ, ನನಗೆ ಖಾಸಗಿ ಶಾಲೆ ಪ್ರವೇಶ ಕೊಡಿಸಿ ಎಂದು ಮನವಿ ಮಾಡಿದ.

“ಸರ್ ನಮಸ್ತೆ, ನನ್ನ ಮಾತನ್ನು ಆಲಿಸಿ, ನನ್ನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿ. ನನ್ನ ವಿದ್ಯಾಭ್ಯಾಸಕ್ಕೆ ನನ್ನ ಪೋಷಕರು ನೆರವಾಗುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ ಎಂಬುದು ನನ್ನ ಸರ್ಕಾರಿ ಶಾಲೆ ಶಿಕ್ಷಕರಿಗೆ ಗೊತ್ತಿಲ್ಲ’’ ಎಂದು ಆ ಬಾಲಕ ಮುಖ್ಯಮಂತ್ರಿ ಬಳಿ ಅಲವತ್ತುಕೊಂಡ.

BIG NEWS: ಶಾಲಾ ಆವರಣದಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ವಿಚಾರ; ನಾವೇನು ಬಾಂಬ್ ಹಾಕುವ ತರಬೇತಿ ಕೊಟ್ಟಿಲ್ಲ, ಏರ್ ಗನ್ ತರಬೇತಿ ಕೊಟ್ಟರೆ ತಪ್ಪೇನು…..? ಎಂದ ಸಿ.ಟಿ.ರವಿ

ಇದನ್ನು ಕೇಳುತ್ತಿದ್ದಂತೆಯೇ ಸಿಎಂ ನಿತೀಶ್ ಕುಮಾರ್ ಮುಖದ ಭಾವನೆ ಬದಲಾಯಿತು. ಮಗುವಿನ ಮಾತು ಕೇಳುತ್ತಿದ್ದಂತೆಯೇ ಹತ್ತಿರದಲ್ಲಿದ್ದ ಅಧಿಕಾರಿಗಳನ್ನು ಕರೆದು ಮಗುವಿನ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಿದರು.

ನಂತರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಾಲಕ, ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ, ಶಿಕ್ಷಣದ ಗುಣಮಟ್ಟ ಚಿಂತಾಜನಕ ಪರಿಸ್ಥಿತಿಯಲ್ಲಿದೆ. ನಮ್ಮ ಗಣಿತ ಶಿಕ್ಷಕರಿಗೆ ಸಂಖ್ಯೆಗಳದ್ದೇ ಸಮಸ್ಯೆ, ಅವರಿಗೆ ಬೇಸಿಕ್ ಇಂಗ್ಲೀಷ್ ಸಹ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ.

ನನ್ನ ತಂದೆ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅದರಿಂದ ಬಂದ ಹಣವನ್ನೆಲ್ಲಾ ಮದ್ಯ ಸೇವನೆಗೆ ಖರ್ಚು ಮಾಡುತ್ತಾರೆ. ಹೀಗಾಗಿ ನನ್ನ ಶಿಕ್ಷಣದ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಕ ಹೇಳಿದ್ದಾನೆ.

ಒಬ್ಬ ಮುಖ್ಯಮಂತ್ರಿ ಬಳಿ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದ ವಿಚಾರವನ್ನು ಬಿಚ್ಚಿಟ್ಟ ಪುಟ್ಟ ಬಾಲಕನ ಧೈರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ಆಡಳಿತ ನಡೆಸುವವರಿಗೆ ಸಮಸ್ಯೆಯ ಕೈಗನ್ನಡಿಯಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...