ಬೆಳಗಾವಿ: ಹುಡುಗಿಯ ವಿಚಾರವಾಗಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.
24 ವರ್ಷದ ಮುಸಾಫ್ ದೇಸಾಯಿ ಕೊಲೆಯಾದ ದುರ್ದೈವಿ. 26 ವರ್ಷದ ರಮಜಾನ್ ದೇಸಾಯಿ ತಮ್ಮನನ್ನೇ ಹತ್ಯೆಗೈದ ವ್ಯಕ್ತಿ. ಯುವತಿಯ ವಿಚಾರವಾಗಿ ಮುಸಾಫ್ ದೇಸಾಯಿ ಪ್ರತಿದಿನ ತಂದೆ-ತಾಯಿಯನ್ನು ಬೈಯ್ಯುತ್ತಿದ್ದನಂತೆ. ಇದೇ ವಿಚಾರವಾಗಿ ಅಣ್ಣ-ತಮ್ಮನ ನಡುವೆ ವಾಗ್ವಾದ ನಡೆದಿದೆ.
ಕೋಪದ ಭರದಲ್ಲಿ ತಮ್ಮನನ್ನು ಚಾಕುವಿನಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಮುಸಾಫ್ ನನ್ನು ಗೋಕಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಗೋಕಾಕ್ ನಗರ ಪೊಲೀಸರು ಆರೋಪಿ ರಮಜಾನ್ ನನ್ನು ಬಂಧಿಸಿದ್ದಾರೆ