ತಮಿಳುನಾಡಿನ ತೂತುಕುಡಿಯ 57 ವರ್ಷದ ಮಹಿಳೆಯೊಬ್ಬರು 36 ವರ್ಷಗಳಿಂದ ಪುರುಷ ವೇಷ ಧರಿಸಿದ್ದರು. ತನ್ನ ಮಗಳಿಗಾಗಿ ಈ ರೀತಿ ವೇಷ ಮರೆಸಿಕೊಂಡಿದ್ದರು.
ಕಟ್ಟುನಾಯಕನಪಟ್ಟಿ ಗ್ರಾಮದವರಾದ ಪೆಚ್ಚಿಯಮ್ಮಾಳ್ ಅವರು ತಮ್ಮ ಒಂಟಿ ಮಗಳನ್ನು ಪಿತೃಪ್ರಧಾನ ಸಮಾಜದಲ್ಲಿ ಸುರಕ್ಷಿತವಾಗಿ ಬೆಳೆಸಲು ಈ ಅಸಾಮಾನ್ಯ ಹೆಜ್ಜೆ ಇಟ್ಟಿದ್ದಾಗಿ ಹೇಳಿದ್ದಾರೆ.
ಮದುವೆಯಾದ ಕೆಲವು ತಿಂಗಳುಗಳ ನಂತರ ಪೆಚ್ಚಿಯಮ್ಮಲ್ ಗೆ ಕಷ್ಟವಾಯಿತು. ಮದುವೆಯಾದ ಕೇವಲ 15 ದಿನಗಳ ನಂತರ ಆಕೆಯ ಪತಿ ಶಿವ ಸಾವನ್ನಪ್ಪಿದ್ದಾರೆ. ಆಗ ಪೆಚ್ಚಿಯಮ್ಮಾಳ್ 20 ವರ್ಷ ವಯಸ್ಸಿನವಳಾಗಿದ್ದಳು. ಕೆಲ ದಿನಗಳಲ್ಲೇ ಷಣ್ಮುಗಸುಂದರಿಗೆ ಜನ್ಮ ನೀಡಿದರು.
ಪೆಚ್ಚಿಯಮ್ಮಾಳ್ ಒಬ್ಬಂಟಿಯಾಗಿ ಮಗುವನ್ನು ಬೆಳೆಸುವುದು ಕಷ್ಟಕರವಾಗಿತ್ತು. ತನ್ನ ಮಗಳನ್ನು ಸಾಕಲು ನಿರ್ಮಾಣ ಸ್ಥಳಗಳು, ಹೋಟೆಲ್ ಗಳು ಮತ್ತು ಚಹಾ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಮತ್ತೆ ಮದುವೆಯಾಗದಿರಲು ನಿರ್ಧರಿಸಿದ್ದರು.
ಪುರುಷರ ಪ್ರಾಬಲ್ಯವಿರುವ ಈ ಎಲ್ಲಾ ಕೆಲಸದ ಸ್ಥಳಗಳಲ್ಲಿ ಅವಳು ಕಿರುಕುಳ ಅನುಭವಿಸಿದ್ದು, ಒಂದು ದಿನ ‘ಪುರುಷ’ನಾಗಲು ನಿರ್ಧರಿಸಿದರು. ತನ್ನ ಉಡುಪನ್ನು ಅಂಗಿ ಮತ್ತು ಲುಂಗಿಗೆ ಬದಲಾಯಿಸಿದ್ದಲ್ಲದೇ, ತನ್ನನ್ನು ಮುತ್ತು ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ಅಲ್ಲಿಂದ 36 ವರ್ಷಗಳ ಕಾಲ ಪುರುಷ ವೇಷ ಧರಿಸಿ ಬದುಕಿದ್ದಾರೆ. ನಾವು 20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ನೆಲೆಸಿದೆವು. ಮನೆಗೆ ಮರಳಿದ ನನ್ನ ಹತ್ತಿರದ ಸಂಬಂಧಿಕರು ಮತ್ತು ನನ್ನ ಮಗಳಿಗೆ ಮಾತ್ರ ನಾನು ಮಹಿಳೆ ಎಂದು ತಿಳಿದಿತ್ತು ಎಂದು ಅವರು ಹೇಳಿಕೊಂಡುದ್ದಾರೆ.
ಷಣ್ಮುಗಸುಂದರಿ ಈಗ ಮದುವೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಪೆಚ್ಚಿಯಮ್ಮಾಳ್ ತನ್ನ ಉಡುಪನ್ನು ಅಥವಾ ಗುರುತನ್ನು ಬದಲಾಯಿಸಲು ಇನ್ನೂ ಸಿದ್ಧವಾಗಿಲ್ಲ. ಗುರುತಿನ ಬದಲಾವಣೆಯು ತನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದ್ದಾರೆ.
ಪೆಚ್ಚಿಯಮ್ಮಾಳ್ ಇತ್ತೀಚೆಗೆ ಮಹಿಳಾ ಗುರುತಿನ ಮೇಲೆ MGNREGS ಜಾಬ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಆಕೆಯ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಪ್ರಕಾರ, ಅವಳು ಇನ್ನೂ ಪುರುಷನಾಗಿಯೇ ಉಳಿದಿದ್ದಾರೆ.