ಭಕ್ತರು ತಾವು ಬಯಸಿದ್ದನ್ನು ಈಡೇರಿಸಿಕೊಳ್ಳುವ ಸಲುವಾಗಿ ದೇವರ ಮೊರೆ ಹೋಗುತ್ತಾರೆ. ಇದಕ್ಕಾಗಿ ಹರಕೆಯನ್ನು ಸಹ ಹೊತ್ತುಕೊಳ್ಳುತ್ತಾರೆ. ತಾವು ಬಯಸಿದ್ದು ಈಡೇರಿದ ಬಳಿಕ ಹರಕೆ ತೀರಿಸುವುದು ವಾಡಿಕೆ.
ಇದೇ ರೀತಿ ಯುವಕನೊಬ್ಬ ಮನೆತನದ ಅಭಿವೃದ್ಧಿಗಾಗಿ ಹರಕೆ ಹೊತ್ತಿದ್ದು, ಇದು ಈಡೇರಿದ ಬಳಿಕ ಒಂದು ಕ್ವಿಂಟಾಲ್ ಜೋಳದ ಚೀಲ ಹೊತ್ತು ಸುಮಾರು 200 ಮೀಟರ್ ವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.
ಬಾಗಲಕೋಟೆ ಜಿಲ್ಲೆ ಅಮೀನಗಡ ಸಮೀಪದ ಗುಡೂರ ಗ್ರಾಮದ 18 ವರ್ಷದ ಪರಶುರಾಮ ಹೂಲಗೇರಿ ಹರಕೆ ತೀರಿಸಿದ ಯುವಕನಾಗಿದ್ದು, ಈತ ಹುಲ್ಲೇಶ್ವರ ದೇವರ ಜಾತ್ರೆ ಸಂದರ್ಭದಲ್ಲಿ ಕ್ವಿಂಟಾಲ್ ತೂಕದ ಜೋಳದ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ್ದಾನೆ.