alex Certify ಅಮೆರಿಕಾದಲ್ಲಿ ಉಂಟಾದ ಧೂಳಿನ ಚಂಡಮಾರುತಕ್ಕೆ ಹಗಲು ರಾತ್ರಿಯಾಗಿ ಬದಲಾಯ್ತು: ಆಘಾತಗೊಂಡ ನಿವಾಸಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಉಂಟಾದ ಧೂಳಿನ ಚಂಡಮಾರುತಕ್ಕೆ ಹಗಲು ರಾತ್ರಿಯಾಗಿ ಬದಲಾಯ್ತು: ಆಘಾತಗೊಂಡ ನಿವಾಸಿಗಳು

ಗುರುವಾರ ಅಮೆರಿಕಾದಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಭಾರಿ ಪ್ರಮಾಣದ ಧೂಳಿನ ಚಂಡಮಾರುತ ಉಂಟಾಗಿದೆ.

ಅಪಾರ ಪ್ರಮಾಣದ ಧೂಳು ಪ್ರದೇಶವನ್ನು ಆವರಿಸಿದ್ದರಿಂದ ಆಕಾಶವು ಕತ್ತಲೆಯಾಗಿದೆ. ಈ ಪ್ರದೇಶವನ್ನು ಆವರಿಸಿರುವ ಧೂಳು ಗೋಡೆಯಂತಾದ ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಇದನ್ನು ನೋಡಿದ ಜನರು ಆಘಾತಕ್ಕೊಳಗಾಗಿದ್ದಾರೆ.

ಇದರ ಪರಿಣಾಮವಾಗಿ ಕನ್ಸಾಸ್‌ನಿಂದ ವಿಸ್ಕಾನ್ಸಿನ್‌ಗೆ ವಿನಾಶಕಾರಿಯಾಗಿ ಪರಿಣಮಿಸಿದೆ. ದಕ್ಷಿಣ ಡಕೋಟಾದ ಸಿಯೋಕ್ಸ್ ಜಲಪಾತದಲ್ಲಿ ಹಾನಿಯುಂಟಾಗಿದ್ದು, ಹಲವಾರು ಮರಗಳು ಧರೆಗುರುಳಿವೆ. ಮಿನ್ನೇಸೋಟದ ಕಂಡಿಯೋಹಿ ಕೌಂಟಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ವ್ಯಾಪಕ ಹಾನಿಯನ್ನು ಬಿಟ್ಟು, ಚಂಡಮಾರುತವು ‘ಡೆರೆಕೋ’ ಆಗಿ ತೀವ್ರಗೊಂಡಿತು. ರಾಷ್ಟ್ರೀಯ ಹವಾಮಾನ ಸೇವೆ ಪ್ರಕಾರ, ಡೆರೆಕೊ ವ್ಯಾಪಕವಾದ, ದೀರ್ಘಾವಧಿಯ ಗಾಳಿಯ ಚಂಡಮಾರುತವಾಗಿದ್ದು, ಇದರಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತದೆ.

ಧೂಳಿನ ಚಂಡಮಾರುತವು ಅಮೆರಿಕಾದಲ್ಲಿ ಘರ್ಜಿಸಿದೆ. ನೆಬ್ರಸ್ಕಾದಿಂದ ಮಿನ್ನೇಸೋಟಕ್ಕೆ 300 ಮೈಲುಗಳಷ್ಟು ಪ್ರಯಾಣಿಸಿ ಹಲವಾರು ಪ್ರದೇಶಗಳಲ್ಲಿ ಹಾನಿಯುಂಟು ಮಾಡಿದೆ. ಅಪ್ಪರ್ ಗ್ರೇಟ್ ಲೇಕ್ಸ್‌ನಿಂದ ದಕ್ಷಿಣದ ಗ್ರೇಟ್ ಪ್ಲೇನ್ಸ್‌ಗೆ ತೀವ್ರವಾದ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಅಪ್ಪರ್ ಗ್ರೇಟ್ ಲೇಕ್ಸ್‌ನಿಂದ ದಕ್ಷಿಣ ಗ್ರೇಟ್ ಪ್ಲೇನ್ಸ್‌ಗೆ ಚದುರಿದ ಮತ್ತು ಸಂಜೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಭಾರಿ ಚಂಡಮಾರುತದಿಂದಾಗಿ ಹಾನಿಗೊಳಿಸಬಲ್ಲವು ಎಂದು ಹವಾಮಾನ ಮುನ್ಸೂಚನೆ ಸಂಸ್ಥೆ ಎಚ್ಚರಿಸಿದೆ.

— Colin McCarthy (@US_Stormwatch) May 13, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...