ನಾವು ನೋಡಿರದ ಪ್ರದೇಶಗಳಿಗೆ ತೆರಳಿದಾಗ ಅದನ್ನು ವೀಕ್ಷಿಸುವತ್ತ ನಮ್ಮ ಗಮನವಿರುತ್ತದೆ. ಇದೀಗ ಲಡಾಖ್ನಲ್ಲಿ ಆಕರ್ಷಕ ಪ್ರದರ್ಶನದೊಂದಿಗೆ ಮಕ್ಕಳ ಗುಂಪು ನೆಟ್ಟಿಗರ ಮನಗೆದ್ದಿದೆ. ಈ ಚಿಕ್ಕ ಮಕ್ಕಳ ತಂಡವು ಪರ್ವತದಲ್ಲಿ ಗಿಟಾರ್ ನುಡಿಸುತ್ತಾ ಹಾಡುವುದರಲ್ಲಿ ಮಗ್ನರಾಗಿದ್ದಾರೆ.
ಟ್ರಾವೆಲ್ ಬ್ಲಾಗರ್ ಮತ್ತು ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಸ್ನೇಹಾ ದೇಸಾಯಿ ಅವರು ಇತ್ತೀಚೆಗೆ ಲಡಾಖ್ನ ಲೇಹ್ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರು ನುಬ್ರಾ ಕಣಿವೆಯ ಪ್ರಬಲ ಶಿಖರದಲ್ಲಿ ಉತ್ಸಾಹದಿಂದ ಕೂಡಿದ ಪುಟ್ಟ ಮಕ್ಕಳ ಗುಂಪನ್ನು ನೋಡಿದ್ದಾರೆ. ಹತ್ತು ಮಂದಿ ಮಕ್ಕಳು ದಿಲ್ ಬೇಪರ್ವಾದ ಸುಂದರವಾದ ಪ್ರದರ್ಶನವನ್ನು ನೀಡಿದ್ದಾರೆ.
ಮಕ್ಕಳ ಸಾಮರಸ್ಯವನ್ನು ಕಂಡ ಅವರು ಮಂತ್ರಮುಗ್ಧರಾಗಿದ್ದಾರೆ. ಇದನ್ನು ತನ್ನ ಪ್ರವಾಸದ ಹೈಲೈಟ್ ಎಂದು ದೇಸಾಯಿ ಕರೆದಿದ್ದಾರೆ. ಮಕ್ಕಳ ಆರಾಧ್ಯ ಹಾಡಿನಿಂದ ಪ್ರೇರಿತರಾದ ತಿವಾರಿ ಮತ್ತು ಕುಹಾದ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನೆಟ್ಟಿಗರು ಕೂಡ ಮಕ್ಕಳ ಮೇಲೆ ತಮ್ಮ ಪ್ರೀತಿಯನ್ನು ಧಾರೆಯೆರೆದಿದ್ದಾರೆ. ಮಕ್ಕಳ ಇತರೆ ಹಾಡುಗಳ ಹೆಚ್ಚಿನ ವಿಡಿಯೋಗಳನ್ನು ಹುಡುಕಿದ್ದಾರೆ. ಇದು ತನ್ನ ದಿನವನ್ನು ಖುಷಿ ಮಾಡಿದೆ ಅಂತೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.