ಇಂಡೋನೇಷ್ಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ವಾಟರ್ ಸ್ಲೈಡ್ ಅಪಘಾತದ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳು ಸವಾರಿ ಮಾಡುತ್ತಿದ್ದ ವಾಟರ್ ಸ್ಲೈಡ್ ಮಧ್ಯದಲ್ಲಿ ಕುಸಿದ ನಂತರ 30 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ಇತರರು ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ನೋಡುಗರು ಆಘಾತದಿಂದ ಕಿರುಚಿದ್ದಾರೆ. ಮೇ 7 ರಂದು ಪೂರ್ವ ಜಾವಾದ ಸುರಬಯಾ ನಗರದ ಕೆಂಜರಾನ್ ಪಾರ್ಕ್‌ನಲ್ಲಿ ಈ ಘಟನೆ ಸಂಭವಿಸಿದೆ.
ಸ್ಲೈಡ್‌ನಲ್ಲಿ ಸಿಕ್ಕಿಬಿದ್ದ ಒಟ್ಟು 16 ಮಂದಿಯಲ್ಲಿ ಎಂಟು ಮಂದಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರು ಮೂಳೆ ಮುರಿತಕ್ಕೊಳಗಾಗಿದ್ದಾರೆ.
ಕಳೆದ 9 ತಿಂಗಳ ಹಿಂದೆ ನಿರ್ವಹಣಾ ಕಾಮಗಾರಿ ನಡೆದಿದ್ದು, ಜನರ ಹೊರೆಯನ್ನು ತಡೆದುಕೊಳ್ಳಲು ಸ್ಲೈಡ್ ಸಾಧ್ಯವಾಗಿಲ್ಲ. ಹೀಗಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಅಧಿಕಾರಿಗಳು ವಾಟರ್ ಪಾರ್ಕ್ ಅನ್ನು ಮುಚ್ಚಿದ್ದಾರೆ. ಸ್ಲೈಡ್ ಕುಸಿತದ ಕಾರಣವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.
ಅಪಘಾತಕ್ಕೆ ಉದ್ಯಾನದ ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಲಾಗಿದ್ದು, ಗಾಯಾಳುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಅವರ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾಗುತ್ತದೆ.
ಅಮೆರಿಕದ ಫ್ಲೋರಿಡಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದ ಇದೇ ರೀತಿಯ ಅಪಘಾತದಲ್ಲಿ 14 ವರ್ಷದ ಬಾಲಕ 430 ಅಡಿ ಆಳಕ್ಕೆ ಧುಮುಕಿ ಸಾವನ್ನಪ್ಪಿದ್ದಾನೆ. ಭೀಕರ ಅಪಘಾತದ ವಿಡಿಯೋದಲ್ಲಿ ಹುಡುಗನು ಫ್ರೀ ಫಾಲ್ ರೈಡ್‌ನಿಂದ ಬೀಳುತ್ತಿದ್ದಂತೆ ನೋಡುಗರು ಕಿರುಚಿದ್ದಾರೆ. ಟೈರ್ ಸ್ಯಾಂಪ್ಸನ್ ಎಂಬ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆತ ಮೃತಪಟ್ಟಿದ್ದಾನೆ.
https://www.youtube.com/watch?v=iUtDz4S3usM