ಆರ್.ಟಿ.ಐ. ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ತಮಿಳುನಾಡಿನಲ್ಲಿ ಅಸ್ಪೃಶ್ಯತೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಈ ಸಮಸ್ಯೆಗೆ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಕಾರ್ತಿಕ್ ಎಂಬ ಕಾರ್ಯಕರ್ತ ಸಲ್ಲಿಸಿದ ಆರ್.ಟಿ.ಐ. ಅರ್ಜಿಯ ಪ್ರಕಾರ, ಅಸ್ಪೃಶ್ಯತೆ ಎಂಬ ಪಿಡುಗಿನಿಂದಾಗಿ 445 ಹಳ್ಳಿಗಳು ದೌರ್ಜನ್ಯಕ್ಕೆ ಒಳಗಾಗಿವೆ. ಹಾಗೂ 341 ಗ್ರಾಮಗಳು ಸುಪ್ತ ದೌರ್ಜನ್ಯ ಪೀಡಿತವಾಗಿದೆ.
ಮಧುರೈ 43 ಸಕ್ರಿಯ ಪೀಡಿತ ಗ್ರಾಮ ಹಾಗೂ 61 ಸುಪ್ತ ಪೀಡಿತ ಹಳ್ಳಿಗಳೊಂದಿಗೆ ಅಸ್ಪೃಶ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಾದ ಬಳಿಕ ವಿಲ್ಲಪುರಂ ಹಾಗೂ ತಿರುನಲ್ವೇಲಿ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.
ದಲಿತ ಪಕ್ಷವಾದ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ತೋಲ್ ತಿರುಮಾವಳವನ್, ಅಸ್ಪೃಶ್ಯತೆ ತಮಿಳುನಾಡಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಇದೆ ಎಂದು ಹೇಳಿದ್ದಾರೆ.
ಇದು ಬಹಳ ಕಡಿಮೆ ಸಂಖ್ಯೆ ಎಂದು ನಾನು ಭಾವಿಸುತ್ತೇನೆ. ಇದಕ್ಕಿಂತ ಹೆಚ್ಚು ಗ್ರಾಮಗಳು ಅಸ್ಪೃಶ್ಯತೆ ಪೀಡಿತವಾಗಿವೆ. ಅಸ್ಪೃಶ್ಯತೆಯನ್ನು ನಾವು ದೇಶಾದ್ಯಂತ ನಿರ್ಮೂಲನೆ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್ಟಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತೋಲ್ ತಿರುಮಾವಳನ್ ಹೇಳಿದ್ದಾರೆ.