alex Certify ಈ ʼಉಪಾಯʼದಿಂದ ಏರಿರುವ ತೂಕ ಇಳಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಉಪಾಯʼದಿಂದ ಏರಿರುವ ತೂಕ ಇಳಿಸಿ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ಮುಜುಗರಕ್ಕೊಳಗಾಗುವ ಹುಡುಗಿಯರು ಬೊಜ್ಜು ಕರಗಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ.

ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕಾಗಿ ತೂಕ ಏರಿರುತ್ತದೆ. ಇದ್ರ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಕೆಲಸದ ನಡುವೆ ದೇಹದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಕೆಲವೊಂದಿಷ್ಟು ಸಮಯ ನೀಡುವುದು ಅವಶ್ಯಕ.

ತೂಕ ಇಳಿಸಿಕೊಂಡು ಬೊಜ್ಜು ಹೊಟ್ಟೆ ಕರಗಿಸಿಕೊಳ್ಳಲು ಬಯಸಿದ್ದರೆ ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ. ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಲು ಅದಕ್ಕೆ ಸಂಬಂಧಿಸಿದ ವ್ಯಾಯಾಮವನ್ನು ಅವಶ್ಯವಾಗಿ ಮಾಡಿ. ದಿನದಲ್ಲಿ 500-600 ಕ್ಯಾಲೋರಿ ಬರ್ನ್ ಮಾಡುವ ವ್ಯಾಯಾಮ ಮಾಡಿ.

ಆಹಾರದ ಜೊತೆ ಹೆಚ್ಚು ಉಪ್ಪು ಬಳಸುವುದರಿಂದ ರಕ್ತದೊತ್ತಡ ಹಾಗೂ ತೂಕ ಏರಿಕೆ ಸಮಸ್ಯೆ ಕಾಡಲು ಶುರುವಾಗುತ್ತದೆ. ಹಾಗಾಗಿ ನಿಮ್ಮ ಆಹಾರದ ಜೊತೆ ಆದಷ್ಟು ಕಡಿಮೆ ಉಪ್ಪು ಸೇವನೆ ಮಾಡಿ.

ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಬಯಸಿದ್ದರೆ ತರಕಾರಿ, ಹಣ್ಣು, ಮೀನು, ಕೋಳಿ ಹಾಗೂ ಕಡಿಮೆ ಕೊಬ್ಬಿರುವ ಡೈರಿ ಉತ್ಪನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ. ಜೊತೆಗೆ ಉಪ್ಪು ಹಾಗೂ ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿ.

ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ ಒತ್ತಡದಿಂದ ದೂರವಿರಿ. ಒತ್ತಡ ದೇಹದಲ್ಲಿರುವ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಇದು ವೇಗವಾಗಿ ತೂಕ ಹೆಚ್ಚಲು ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...