ಕೆಂಡ ಹಾಯುವಾಗ ವ್ಯಕ್ತಿಯೊಬ್ಬ ಬೆಂಕಿಗೆ ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿರುವ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ತಂಜಾವೂರು ಜಿಲ್ಲೆಯ ಪಾಂಡನಲ್ಲೂರು ಗ್ರಾಮದಲ್ಲಿ ಉತ್ಸವ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಕೆಂಡ ಹಾಯುವ ಪದ್ದತಿಯಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ.
ಸಮೀಪದ ಸೆರಕಡಂಬೂರು ಗ್ರಾಮದ 52 ವರ್ಷದ ಭೂಮಿನಾದನ್ ಕೆಂಡ ಹಾಯುವಾಗ ಆಯತಪ್ಪಿ ಬೆಂಕಿ ಮೇಲೆ ಬಿದ್ದಿದ್ದಾರೆ. ಇದರಿಂದಾಗಿ ತೀವ್ರ ಸುಟ್ಟ ಗಾಯಗಳಾಗಿರುವ ಅವರನ್ನು ಕುಂಭಕೋಣಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.