ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇತ್ತೀಚೆಗೆ ಆಪರೇಷನ್ ಕಮಲ ಅನಿವಾರ್ಯ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಬೇರೆ ಪಕ್ಷದ ನಾಯಕರನ್ನು ಸೆಳೆಯುವ ಕಾರ್ಯ ಆರಂಭವಾಗಿದೆ. 5-6 ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವುದು ನಿಶ್ಚಿತ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಸೋಮಶೇಖರ್, ಮೈಸೂರು ಭಾಗದ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ನಾಯಕರೊಂದಿಗೆ ಕೊನೆ ಹಂತದ ಮಾತುಕತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಗ್ರೀನ್ ಸಿಗ್ನಲ್ ಬಾಕಿ ಇದೆ ಅಷ್ಟೇ ಎಂದರು.
SHOCKING NEWS: ಕಾರು ಅಡ್ಡಗಟ್ಟಿ 20 ಲಕ್ಷ ನಗದಿನೊಂದಿಗೆ ಕಾರು ಸಮೇತ ಎಸ್ಕೇಪ್ ಆದ ಖದೀಮರು
ಯಾವುದೇ ಕಂಡಿಷನ್ ಗಳಿಲ್ಲದೇ ಬಿಜೆಪಿಗೆ ಬರಲು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷದವರೂ ಇದ್ದಾರೆ. ಯಾರು ಆ ನಾಯಕರು ಎಂದು ಹೇಳಲು ಸಾಧ್ಯವಿಲ್ಲ. ಕೊನೆ ಹಂತದ ಮಾತುಕತೆ ಮುಗಿಯಲಿ ನಂತರ ಹೇಳುತ್ತೇನೆ ಎಂದು ತಿಳಿಸಿದ್ದಾರೆ.