ಮಂಡ್ಯ: ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರಿನಲ್ಲಿದ್ದ 20 ಲಕ್ಷ ನಗದಿನೊಂದಿಗೆ ಕಾರಿನ ಸಮೇತ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಹೊಸಬೂದನೂರು ಬಳಿ ನಡೆದಿದೆ.
ಬೆಂಗಳೂರಿನ ನೀಲೇಶ್ ಹಾಗೂ ಆತನ ಸ್ನೇಹಿತ ಋಷಿಕೇಶ್ 20 ಲಕ್ಷ ಹಣದೊಂದಿಗೆ ಕೇರಳಕ್ಕೆ ತೆರಳುತ್ತಿದ್ದರು. ಬೆಂಗಳೂರಿನ ರಾಜಾ ಮಾರ್ಕೆಟ್ ನ ತಿರುಮಲ ಜ್ಯುವೆಲ್ಲರಿ ಶಾಪ್ ನಲ್ಲಿ ಬಂಗಾರವನ್ನು ಮಾರಾಟ ಮಾಡಿ 20 ಲಕ್ಷ ನಗದು ಜತೆ ತೆರಳುತ್ತಿದ್ದ ವೇಳೆ ಹೊಸಬೂದುರು ಬಳಿ 6 ಜನರ ಖದೀಮರ ತಂಡ ಕಾರು ಅಡ್ಡಗಟ್ಟಿದೆ.
ಸುತ್ತಿಗೆ ಹಾಗೂ ರಾಡ್ ನಿಂದ ಇಬ್ಬರ ಮೇಲೂ ಹೊಡೆದು 20 ಲಕ್ಷ ಹಣ ಹಾಗೂ ಸ್ವಿಫ್ಟ್ ಕಾರಿನ ಸಮೇತ ಪರಾರಿಯಾಗಿದ್ದಾರೆ.