ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮೂರು ವರ್ಷದ ಮಗುವಿಗೂ ಅರ್ಧ ಟಿಕೆಟ್ ನೀಡಲಾಗುತ್ತಿದೆ. ಆರು ವರ್ಷದೊಳಗಿನ ಮಕ್ಕಳು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ. ಆರರಿಂದ ಹನ್ನೆರಡು ವರ್ಷದ ಮಕ್ಕಳಿಗೆ ಅರ್ಧ ಟಿಕೆಟ್ ನೀಡಲಾಗುತ್ತಿದ್ದು, ಈಗ ವಯಸ್ಸಿನ ಬದಲಿಗೆ ಮಗುವಿನ ಎತ್ತರ ಪರಿಗಣಿಸಿ ಟಿಕೆಟ್ ಕೊಡಲಾಗುತ್ತಿದೆ.
ಮಗುವಿನ ವಯಸ್ಸು ಎರಡು ವರ್ಷ, ಮೂರು ವರ್ಷವಾಗಿದ್ದರೂ ಮೂರು ಅಡಿ ಎತ್ತರವಿದ್ದರೆ ಅಂತಹ ಪೋಷಕರು ಮಗುವಿಗೆ ಅರ್ಧ ಟಿಕೆಟ್ ಪಡೆಯುವಂತಾಗಿದೆ.
ಮಕ್ಕಳ ಎತ್ತರ ನೋಡಲು ಬಸ್ ಮಧ್ಯದಲ್ಲಿರುವ ಕಂಬಿಗಳ ಮೇಲೆ 3 ಅಡಿ, 4 ಅಡಿ ಎತ್ತರಕ್ಕೆ ಬಣ್ಣದಲ್ಲಿ ಗುರುತು ಮಾಡಲಾಗಿದೆ. ಟಿಕೆಟ್ ನಿರಾಕರಿಸುವ ಪೋಷಕರ ಮಕ್ಕಳನ್ನು ಕಂಬಿ ಬಳಿ ನಿಲ್ಲಿಸಿ ಎತ್ತರ ನೋಡಿ ಟಿಕೆಟ್ ನೀಡಲಾಗುತ್ತದೆ.
ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮಕ್ಕಳು ಮೂರು ಅಡಿ ಎತ್ತರ ಇದ್ದರೆ ಪೂರ್ಣ ಟಿಕೆಟ್ ಪಡೆಯಬೇಕು. ಟಿಕೆಟ್ ಕೌಂಟರ್ ಗಳಲ್ಲಿ ಎತ್ತರ ಅಳೆಯುವ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಿಯಲ್ಲಿಯೂ ಇಂತಹ ವ್ಯವಸ್ಥೆ ಮಾಡಿರುವುದರಿಂದ ಬಡ ಪ್ರಯಾಣಿಕರಿಗೆ ಬಿಸಿತುಪ್ಪವಾಗಿ ಪರಿಗಣಿಸಿದೆ. ಇನ್ನು ಕೆಲವು ಚಿಕ್ಕ ಮಕ್ಕಳ ಬೆಳವಣಿಗೆ ಹೆಚ್ಚಾಗಿದ್ದರೆ ಅಂತಹ ಪೋಷಕರಿಗೆ ಇರಿಸುಮುರಿಸು ಆಗುತ್ತದೆ ಎನ್ನಲಾಗಿದೆ.