ಇದು ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದ ಘಟನೆ. ವ್ಯಕ್ತಿಯೊರ್ವ, ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಕೃತ್ಯವನ್ನ ತನ್ನ ಮೊಬೈಲ್ನಲ್ಲಿ ಚಿತ್ರಿಕರಣ ಮಾಡಿಕೊಂಡು ಆ ಶಿಕ್ಷಕಿಯನ್ನೇ, ಆರೋಪಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ.
ಮೇ 4 ರಂದು ಎಂದಿನಂತೆ ಶಿಕ್ಷಕಿ ಶಾಲಾ ಅವಧಿಯನ್ನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನಡೆದ ಘಟನೆ ಇದು. ಅದೇ ಗ್ರಾಮದ ಅಮೀರ್ ಶಿಕ್ಷಕಿಯನ್ನ ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿದ್ದಾನೆ.
ಅಮೀರ್ ಪರಿಚಯದ ವ್ಯಕ್ತಿಯಾಗಿರುವುದರಿಂದ ಶಿಕ್ಷಕಿ ಕೂಡಾ ಹಿಂದೆ ಮುಂದೆ ನೋಡದೇ, ಆ ವ್ಯಕ್ತಿಯ ಜೊತೆ ಹೋಗಿದ್ದಾಳೆ. ಯಾರೂ ಇಲ್ಲದ ಸ್ಥಳಕ್ಕೆ ಆಕೆಯನ್ನ ಕರೆದುಕೊಂಡು ಹೋಗಿ, ಆ ವ್ಯಕ್ತಿ ಶಿಕ್ಷಕಿಗೆ ಮೂರ್ಛೆ ಹೋಗುವ ಔಷಧಿ ಮೂಗಿಗೆ ಹಿಡಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ.
28 ವರ್ಷದ ಶಿಕ್ಷಕಿಯನ್ನ ಅತ್ಯಾಚಾರ ಮಾಡಿದ ಆ ವ್ಯಕ್ತಿ, ಕೆಲವರ ಸಹಾಯದಿಂದ ಅತ್ಯಾಚಾರ ಮಾಡಿದ್ದನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಂಡು, ಕೊನೆಗೆ ಮತಾಂತರ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ. ಹಾಗೆ ಮತಾಂತರವಾದರೆ ತಾನೇ ಮದುವೆ ಆಗುವುದಾಗಿ ಕಂಡಿಶನ್ ಇಟ್ಟಿದ್ದಾನೆ.
ಈಗ ಆರೋಪಿ ಅಮೀರ್ ಸೇರಿದಂತೆ ಐವರ ವಿರುದ್ಧ ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ.