alex Certify ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಬಣ್ಣದ ಚುಕ್ಕಿಯ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಬಣ್ಣದ ಚುಕ್ಕಿಯ ಹಿಂದಿದೆ ಈ ಕಾರಣ

Don't throw away the banana's with brown spots..... - Wendy O'Hare Skincareಬಾಳೆಹಣ್ಣಿನ ಸಿಪ್ಪೆಯಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡರೆ ಏನು ಮಾಡುತ್ತೀರಿ..? ಅದು ಕೊಳೆತಿದೆ ಅಂತಾ ತಿಪ್ಪೆಗೆಸೆಯುತ್ತೀರಾ..? ಇದೀಗ, ಫ್ಲೋರಿಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಕಲೆಗಳ ಹಿಂದಿನ ಕಾರಣವನ್ನು ಕಂಡುಕೊಂಡಿದ್ದಾರೆ.

ಹೌದು, ಫ್ಲೋರಿಡಾ ಯೂನಿವರ್ಸಿಟಿಯ ಸಂಶೋಧಕರು ಬಾಳೆಹಣ್ಣಿನ ಮೇಲೆ ಕಂದು ಬಣ್ಣದ ಚುಕ್ಕೆಗಳ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಹಾಗೂ ಅದಕ್ಕೆ ಪರಿಹಾರವನ್ನು ಸಹ ಹೇಳಿದ್ದಾರೆ. ಈ ಸಂಶೋಧನೆಯನ್ನು ಭೌತಿಕ ಜೀವಶಾಸ್ತ್ರದಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದ ಪ್ರಮುಖ ಲೇಖಕ ಆಲಿವರ್ ಸ್ಟೀನ್‌ಬಾಕ್ ಪ್ರಕಾರ, 50 ಮಿಲಿಯನ್ ಟನ್ ಬಾಳೆಹಣ್ಣುಗಳು ಆಹಾರ ತ್ಯಾಜ್ಯವಾಗಿ ಕೊನೆಗೊಳ್ಳುತ್ತವೆ. ಇದು ಈ ಅಧ್ಯಯನ ನಡೆಸಲು ಅವರನ್ನು ಪ್ರೇರೇಪಿಸಿತಂತೆ.

ಸಂಶೋಧಕರ ಪ್ರಕಾರ, ಬಾಳೆಹಣ್ಣಿನ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದ್ರೆ ಅವು ಮಾಗಿದ ಸೂಚಕವಾಗಿದೆ. ಅನೇಕ ಹಣ್ಣುಗಳು ತಮ್ಮ ಕಿಣ್ವಗಳಿಗೆ (ಹಣ್ಣುಗಳು ಮತ್ತು ತರಕಾರಿಗಳಲ್ಲಿನ ವಿಶೇಷ ಪ್ರೋಟೀನ್‌ಗಳು) ಒಡ್ಡಿಕೊಂಡ ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಪ್ರಕ್ರಿಯೆಯ ಹೊರತಾಗಿ, ಬಾಳೆಹಣ್ಣಿನ ಚರ್ಮವು ಕಂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ, ಅವುಗಳು ಎಥಿಲೀನ್ ಅನಿಲವನ್ನು ಹೊಂದಿರುತ್ತವೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಎಥಿಲೀನ್ ಅನಿಲದ ಪ್ರಮಾಣವು ಹೆಚ್ಚಾದಾಗ ಅದರ ಹಸಿರು ಬಣ್ಣವು ಮಸುಕಾಗುತ್ತದೆ. ಇದು ಬಾಳೆಹಣ್ಣುಗಳ ಕಂದು ಬಣ್ಣಕ್ಕೆ ಕಾರಣವಾಗುತ್ತದೆ.

ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದು ಅದರ ರುಚಿಯನ್ನು ಸಿಹಿಗೊಳಿಸುತ್ತದೆ. ಅದರ ಸಿಹಿ ರುಚಿಯ ಹೊರತಾಗಿಯೂ, ಜನರು ಬಾಳೆಹಣ್ಣುಗಳನ್ನು ಎಸೆಯುತ್ತಾರೆ. ಬೇಕಿಂಗ್ ರೆಸಿಪಿಗಳಲ್ಲಿ ಇದರ ಉಪಯೋಗಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.

ಕಂದು ಕಲೆಗಳ ಹಿಂದಿನ ಕಾರಣವನ್ನು ಬಹಿರಂಗಪಡಿಸಲು ಕಂಪ್ಯೂಟರ್ ಮಾದರಿಯನ್ನು ಸಹ ಬಳಸಲಾಯಿತು. ಈ ಕಂದು ಚುಕ್ಕೆಗಳು ಕೆಲವು ಸ್ಥಳಗಳಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತವೆ ಎಂಬುದರ ಕುರಿತು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಅವರು ಇನ್ನೂ ತೀರ್ಮಾನಕ್ಕೆ ಬಂದಿಲ್ಲ.

ಬಾಳೆಹಣ್ಣಿನೊಂದಿಗೆ ಇತರ ಹಣ್ಣುಗಳನ್ನು ಇಡಬೇಡಿ ಎಂದು ಸಲಹೆ ನೀಡಲು ಎಥಿಲೀನ್ ಅನಿಲವೂ ಕಾರಣವಾಗಿದೆ. ಎಥಿಲೀನ್ ಅನಿಲವು ಸೇಬು ಮತ್ತು ಪೇರಳೆಗಳಂತಹ ಬಾಳೆಹಣ್ಣಿನೊಂದಿಗೆ ಇರಿಸಲಾದ ಇತರ ಹಣ್ಣುಗಳನ್ನು ಮೃದುವಾಗಿಸಲು ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...