alex Certify ವಿಶ್ರಾಂತಿ ಗೃಹದ ಮುಂದೆ ಕಾಣಿಸಿಕೊಂಡ ಚಿರತೆ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ರಾಂತಿ ಗೃಹದ ಮುಂದೆ ಕಾಣಿಸಿಕೊಂಡ ಚಿರತೆ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ

ಮಾನವನ ಅತಿಯಾದ ಅರಣ್ಯ ಅತಿಕ್ರಮಣದಿಂದ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ, ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಾಡಿನಲ್ಲಿ ತಮ್ಮ ವಿಶ್ರಾಂತಿ ಗೃಹದ ಹೊರಗೆ ಚಿರತೆ ಕಾಣಿಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿರುವ ತಮ್ಮ ಅರಣ್ಯ ವಿಶ್ರಾಂತಿ ಗೃಹದ ಮುಂಭಾಗದ ಅಂಗಳದಲ್ಲಿ ಚಿರತೆ ಅಡ್ಡಾಡುತ್ತಿರುವ ಫೋಟೋವನ್ನು ಐಎಫ್‌ಎಸ್ ಅಧಿಕಾರಿ ಆಕಾಶ್ ದೀಪ್ ಬಧವನ್ ಟ್ವೀಟ್ ಮಾಡಿದ್ದಾರೆ. ಚಿರತೆಯನ್ನು ನೋಡಿದಾಗ ಅರಣ್ಯಾಧಿಕಾರಿಗೆ ರಸ್ಕಿನ್ ಬಾಂಡ್‌ನ ಜನಪ್ರಿಯ ಕಥೆಗಳಲ್ಲಿ ಒಂದಾದ ಎ ಟೈಗರ್ ಇನ್ ದಿ ಹೌಸ್ ಕಥೆ ನೆನಪಾಯಿತಂತೆ. ಬಧವಾನ್ ತನ್ನ ಕಾರಿನೊಳಗೆ ಕುಳಿತಿದ್ದಾಗ ಈ ಫೋಟೋ ಕ್ಲಿಕ್ಕಿಸಿದ್ದಾರೆ.

ರಸ್ಕಿನ್ ಬಾಂಡ್ ಕಥೆಯಂತೆ, ಈ ಚಿರತೆಯನ್ನು ಫಾರೆಸ್ಟ್ ರೆಸ್ಟ್ ಹೌಸ್‌ನ ಹೊರಗೆ ಭೇಟಿಯಾದೆ. ಕಳೆದ ರಾತ್ರಿ ನಾವು ಪರಸ್ಪರರ ಕಂಪನಿಯಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇವೆ. ಕತರ್ನಿಯಾಘಾಟ್‌ನ 120 ವರ್ಷಕ್ಕಿಂತ ಹಳೆಯದಾದ ಈ ಎಫ್‌ಆರ್‌ಎಚ್‌ನ ಗೋಡೆಗಳಲ್ಲಿ ತುಂಬಾ ವನ್ಯಜೀವಿ ಇತಿಹಾಸವಿದೆ ಎಂದು ಬಧವಾನ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಅಧಿಕಾರಿಯ ಟ್ವೀಟ್ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಹತ್ತಿರದಲ್ಲಿರುವ ಅಧಿಕಾರಿಯನ್ನು ಅದೃಷ್ಟವಂತರು ಎಂದು ಕರೆದಿದ್ದಾರೆ.

— Akash Deep Badhawan, IFS (@aakashbadhawan) May 11, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...