alex Certify BIG NEWS: ‘ಟ್ವಿಟರ್ ಒಪ್ಪಂದ ತಡೆಹಿಡಿಯಲಾಗಿದೆ’ ಎಂದು ಎಲೋನ್ ಮಸ್ಕ್ ಹೇಳಿದ ಬೆನ್ನಲ್ಲೇ ಕಂಪನಿ ಷೇರು ಶೇ. 20 ರಷ್ಟು ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಟ್ವಿಟರ್ ಒಪ್ಪಂದ ತಡೆಹಿಡಿಯಲಾಗಿದೆ’ ಎಂದು ಎಲೋನ್ ಮಸ್ಕ್ ಹೇಳಿದ ಬೆನ್ನಲ್ಲೇ ಕಂಪನಿ ಷೇರು ಶೇ. 20 ರಷ್ಟು ಕುಸಿತ

ಮೈಕ್ರೋ ಬ್ಲಾಗಿಂಗ್ ಸೈಟ್‌ ನಲ್ಲಿ ಸ್ಪ್ಯಾಮ್ ಅಥವಾ ನಕಲಿ ಖಾತೆಗಳು ಶೇ. 5 ಕ್ಕಿಂತ ಕಡಿಮೆ ಬಳಕೆದಾರರನ್ನು ದೃಢೀಕರಿಸುವ ವಿವರಗಳಿಗಾಗಿ ಕಾಯುತ್ತಿರುವ ಕಾರಣ ಟ್ವಿಟರ್ ಅನ್ನು ಖರೀದಿಸಲು ತನ್ನ 44 ಬಿಲಿಯನ್ ಡಾಲರ್ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಎಲೋನ್ ಮಸ್ಕ್ ಶುಕ್ರವಾರ ಹೇಳಿದ್ದಾರೆ.

ಟ್ವಿಟರ್ ಮೊದಲ ತ್ರೈಮಾಸಿಕದಲ್ಲಿ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಶೇ. 5 ಕ್ಕಿಂತ ಕಡಿಮೆಯಿರುವ ತಪ್ಪು ಖಾತೆಗಳನ್ನು ಪ್ರತಿನಿಧಿಸುತ್ತದೆ ಎಂದು ಅಂದಾಜಿಸಿದೆ. ಟ್ವಿಟರ್ ನಲ್ಲಿ ಸ್ಪ್ಯಾಮ್ ಬಾಟ್‌ ಗಳನ್ನು ತೆಗೆದುಹಾಕುವುದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಇಂಕ್‌ ನ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರ ಆದ್ಯತೆಗಳಲ್ಲಿ ಒಂದಾಗಿದೆ.

ನಕಲಿ ಖಾತೆಗಳ ವಿರುದ್ಧ ಹೋರಾಡುವುದು ಮತ್ತು ಟ್ವಿಟರ್ ಅನ್ನು ಸುಧಾರಿಸಲು ಮಸ್ಕ್‌ ಪ್ರಯತ್ನವಾಗಿದೆ. ಆದರೆ ಈ ಬಗ್ಗೆ ಪ್ರಕ್ರಿಯೆ ವಿಳಂಬ ಹಿನ್ನಲೆಯಲ್ಲಿ ಟ್ವಿಟರ್ ನೊಂದಿಗಿನ ಒಪ್ಪಂದ ತಡೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಕಂಪನಿಯ ಷೇರುಗಳು ಪ್ರಿಮಾರ್ಕೆಟ್ ವಹಿವಾಟಿನಲ್ಲಿ ಶೇ. 20 ರಷ್ಟು ಕುಸಿತ ಕಂಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...