ಕೆರೊಲಿನಾ: ಮೂರು ಕೋಟಿ ರೂ. ಮೌಲ್ಯದ ಉತ್ತರ ಕೆರೊಲಿನಾದ ಔಟರ್ ಬ್ಯಾಂಕ್ಸ್ ನಲ್ಲಿರುವ ಬೀಚ್ ಹೌಸ್ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿದೆ.
ಕೇಪ್ ಹ್ಯಾಟೆರಸ್ ನ್ಯಾಷನಲ್ ಸೈನ್ಸ್ ಸೀಶೋರ್, ನ್ಯಾಷನಲ್ ಪಾರ್ಕ್ ಸರ್ವಿಸ್ ಸೆರೆಹಿಡಿಯಲಾದ ಈ ದುರ್ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ. ಒಂದೇ ದಿನದಲ್ಲಿ ಕುಸಿದು ಬಿದ್ದ ಎರಡನೇ ಮನೆ ಇದಾಗಿದೆ ಎಂದು ಹೇಳಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಪ್ ಹ್ಯಾಟೆರಾಸ್ ನ್ಯಾಷನಲ್ ಸೀಶೋರ್ (ಸೀಶೋರ್) 24265 ಓಷನ್ ಡ್ರೈವ್, ರೋಡಾಂತೆ, ಎನ್‌ಸಿಯಲ್ಲಿ ಈ ಮನೆ ಕುಸಿದಿದೆ. ಸಮುದ್ರ ತೀರದಲ್ಲಿ ಒಂದೇ ದಿನದಲ್ಲಿ ಕೊಚ್ಚಿಹೋದ ಎರಡನೇ ಮನೆ ಇದಾಗಿದೆ ಎಂದು ಹೇಳಿದೆ. ಸಮುದ್ರದ ತಟದಲ್ಲಿ ಮರದ ತುಂಡುಗಳ ಸಹಾಯದಿಂದ ಮನೆ ನಿಂತಿದೆ. ಆದರೆ ಅಲೆಗಳು ಬರಲು ಪ್ರಾರಂಭಿಸಿದಾಗ ಅದರ ರಭಸಕ್ಕೆ ಸಮುದ್ರಪಾಲಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.